ವಿಟಿಯು ವಿಭಜನೆ ಕೈಬಿಡಲು ಸಾಹಿತಿಗಳ ಒತ್ತಾಯ


ಬೆಳಗಾವಿ:  ಇಲ್ಲಿಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಭಜನೆಗೆ ಎಲ್ಲ ರಂಗಗಳಿಂದಲೂ ವಿರೋಧ ವ್ಯಕ್ತವಾಗುತ್ತಿದ್ದು  ಮಂಗಳವಾರ ಹಿರಿಯ ಸಾಹಿತಿಗಳು ವಿಭಜನೆ ವಿರೋಧಿಸಿ ಜಿಲ್ಲಾಧಿಕಾರಿ  ಎಸ್.ಬಿ.ಬೊಮ್ಮನಹಳ್ಳಿ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಅರ್ಪಿಸಿದರು.
ಈ ವಿಶ್ವವಿದ್ಯಾಲಯವು ಬೆಳಗಾವಿ ಹೋರಾಟಗಾರರು,ಸಾಹಿತಿಗಳು,ಕಲಾವಿದರ ಹೋರಾಟದ ಫಲಶೃತಿಯಾಗಿದ್ದು ಇದನ್ನು ವಿಭಜಿಸುವದು ಗಡಿಭಾಗದ ಕನ್ನಡಿಗರಿಗೆ ಮಾಡಿದ ಅವಮಾನ ಮಾಡಿದಂತೆ ಎಂದು ಮನವಿಯಲ್ಲಿ ಹೇಳಲಾಗಿದೆ.
ವಿಭಜನೆಯ ಪ್ರಸ್ತಾವನೆಯನ್ನು ತಕ್ಷಣ ಕೈಬಿಡಬೇಕು.ಇಲ್ಲದಿದ್ದರೆ ಮುಂದಾಗುವ ಪರಿಣಾಮಗಳಿಗೆ ಸರಕಾರವೇ ಹೊಣೆಯಾಗಬೇಕಾದೀತೆಂದು ಸಾಹಿತಿಗಳು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹಿರಿಯ ಸಾಹಿತಿಗಳಾದ ಚಂದ್ರಕಾಂತ ಪೋಕಳೆ,ಸರಜೂ ಕಾಟ್ಕರ್,ಡಿ.ಎಸ್.ಚೌಗುಲೆ,ಬಿ.ಎಸ್.
ಗವಿಮಠ್ ಸಹಿ,ಆಶಾ ಕಡಪಟ್ಟಿ,ರಾಮಕೃಷ್ಣ ಮರಾಠೆ,ಸುಭಾಷ ಏಣಗಿ,ಶಶಿಧರ ಘಿವಾರಿ,ಜ್ಯೋತಿ ಬದಾಮಿ,ಬಸವರಾಜ ಜಗಜಂಪಿ ಸಹಿತ 32 ಸಾಹಿತಿಗಳು ಮನವಿಗೆ ಸಹಿ ಹಾಕಿದ್ದಾರೆ.
ಸಾಹಿತಿಗಳೂ ಸಹ ವಿಟಿಯು ವಿಭಜನೆ ವಿರೋಧಿ ಹೋರಾಟಕ್ಕೆ ಕೈಜೋಡಿಸಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳೂ ಸಹ ಬೀದಿಗಿಳಿಯುವ ನಿರೀಕ್ಷೆಯಿದೆ.

Leave a Reply

Your email address will not be published.