ಆಪರೇಷನ್ ಕಮಲ: ಮಹಾ ವಿಧಾನಸಭೆ ಎದುರು ದೋಸ್ತಿ ಸರ್ಕಾರ ಶಾಸಕರಿಂದ ಧರಣಿ..!


ಬೆಂಗಳೂರು: ಮಹಾರಾಷ್ಟ್ರದ ವಿಧಾನಸಭೆ ಎದುರು ದೋಸ್ತಿ ಸರ್ಕಾರದ ಶಾಸಕರು ಪ್ರತಿಭಟನೆಗೆ ಸಜ್ಜಾಗುತ್ತಿದ್ದು ಬಿಜೆಪಿಯ ಆಫರೇಷನ್ ಕಮಲ ಯತ್ನದ ಸಂದೇಶವನ್ನು  ದೇಶ್ಯಾದ್ಯಂತ ಜನರಿಗೆ ತಿಳಿಸಲು ಹೊರಟಿದೆ. 

ಜೆಡಿಎಸ್ ಶಾಸಕ ನಾರಾಯಣಗೌಡರನ್ನು ಮಹಾರಾಷ್ಟ್ರದಲ್ಲಿ ಬಂಧನದಲ್ಲಿಟ್ಟಿದ್ದಾರೆ ಮತ್ತು ಇನ್ನುಳಿದ ಅತೃಪ್ತ ಶಾಸಕರನ್ನು  ಮುಂಬಯಿನಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನಿಗಾಃದಲ್ಲಿ ಇಡಲಾಗಿದೆ ಎಂದು ಆರೋಪಿಸಿ ದೋಸ್ತಿ ಸರ್ಕಾರದ ಶಾಸಕರು ಮಹಾರಾಷ್ಟ್ರದ ವಿಧಾನಸಭೆಯ ಮುಂದೆಯೇ ಪ್ರತಿಭಟನೆ ಹಮ್ಮಿಕೊಂಡು ಬಿಜೆಪಿಗೆ ಹಾನಿ ಮಾಡಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ. 

ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತಂತ್ರ ಅನಸರಿಸಿರುವ ಕಾಂಗ್ರೆಸ್ ಬಿಜೆಪಿಗೆ ಭಾರಿ ಹೊಡೆತ ನೀಡಲು ಮುಂದಾಗಿದೆ.  

Leave a Reply

Your email address will not be published.