ಎರಡನೇ ದಿನದ ಕಲಾಪಕ್ಕೆ ಕ್ಷಣಗಣನೆ: ಬಿಜೆಪಿ ಏನು ಮಾಡುತ್ತದೆ ?!


ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ ಬಜೆಟ್ ಅಧಿವೇಶನದ ಎರಡನೇ ದಿನದ ಕಲಾಪಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಿನ್ನೆ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದ ಬಿಜೆಪಿ ಇವತ್ತು ಏನು ಮಾಡುತ್ತದೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.

ನಿನ್ನೆ ಮಧ್ಯಾಹ್ನ ಮತ್ತು ಇಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದ ಯಡಿಯೂರಪ್ಪ ಮುಂದೆ ಏನು ಮಾಡಬೇಕು ಎಂಬುದನ್ನು ಇಂದು ಪ್ರಕಟಿಸುವುದಾಗಿ ಹೇಳಿದ್ದರು.

ಏತನ್ಮಧ್ಯೆ ದೋಸ್ತಿ ಸರಕಾರ ಬಹುಮತ ಕಳೆದುಕೊಂಡಿದ್ದು, ಕಲಾಪಕ್ಕೆ ಅಡ್ಡಿಪಡಿಸುವ ವಿಚಾರವನ್ನು ಬಿಜೆಪಿ ಹೊಂದಿದಂತೆ ಕಾಣುತ್ತಿದೆ. ಯಾವುದಕ್ಕೂ ಇನ್ನು ಸ್ವಲ್ಪ ಹೊತ್ತಿನಲ್ಲೇ ಬಿಜೆಪಿಯ ನಿರ್ಧಾರ ಹೊರಬೀಳಲಿದೆ.

Leave a Reply

Your email address will not be published.