2017ರ ವಿಶ್ವವಿದ್ಯಾಲಯಗಳ ಕಾಯ್ದೆ ಸರ್ಕಾರ ವಾಪಸ್ಸು ಪಡೆಯಲಿ: ಎಬಿವಿಪಿ ಒತ್ತಾಯ


ಚಿಕ್ಕೋಡಿ : ರಾಜ್ಯದಲ್ಲಿ ಉನ್ನತ ಶಿಕ್ಷಣವನ್ನು ಉಳಿಸಲು 2017ರ ವಿಶ್ವವಿದ್ಯಾಲಯಗಳ ಕಾಯ್ದೆಯನ್ನು ಸರ್ಕಾರ ವಾಪಸ್ಸು ಪಡೆಯಬೇಕೆಂದು ಮಂಗಳವಾರ ಚಿಕ್ಕೋಡಿಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು

ಇಲ್ಲಿನ ಬಸವಸರ್ಕಲ್ ಬಳಿ ಪಟ್ಟಣದ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಪದಾಧಿಕಾರಿಗಳು ಸೇರಿ ಮಾನವ ಸರಪಳಿ ನಿರ್ಮಿಸಿ ಸುಮಾರು ಒಂದು ಗಂಟೆಯ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಶಿಕ್ಷಣ ಸಚಿವರು ತರಾತುರಿಯಲ್ಲಿ ಸಾಕಷ್ಟು ಗೊಂದಲಗಳಿಂದ ಕೂಡಿದ ಮಸೂದೆಯನ್ನು ತಂದಿರುವುದು ಉನ್ನತ ಶಿಕ್ಷಣವನ್ನು ಅದಃಪತನಗೊಯ್ಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಮಗ್ರ ಶಿಕ್ಷಣ ನೀತಿಗೆ 2017ರ ವಿಶ್ವವಿದ್ಯಾಲಯಗಳ ಕಾಯ್ದೆ ಸಾಕಷ್ಟು ಗೊಂದಲಗಳಿಂದ ಕೂಡಿದ್ದು,ಶಿಕ್ಷಣ ತಜ್ಞರು,ಚಿಂತಕರು ಸೇರಿದಂತೆ ಸಮಗ್ರವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಣಕ್ಕೋಸ್ಕರ ಸಮಗ್ರ ಶಿಕ್ಷಣ ನೀತಿಯನ್ನು ರೂಪಿಸಬೇಕೆಂದು ಶಿಕ್ಷಣ ಸಚಿವರನ್ನು ಹಾಗೂ ಸರ್ಕಾರವನ್ನು ಎಬಿವಿಪಿ ಆಗ್ರಹಿಸುತ್ತದೆ ಎಂದು ಮನವಿ ಮಾಡಿದ್ದಾರೆ.
ರಾಜ್ಯಪಾಲರು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2017ನ್ನು ಒಪ್ಪಿಗೆ ಕೊಡದೇ ತಿರಸ್ಕಾರ ಮಾಡಬೇಕೆಂದು ವಿನಂತಿಸಿದ್ದಾರೆ.

ತಾಲೂಲಾ ಸಂಚಾಲಕ ಮಲ್ಲಿಕಾರ್ಜುನ ಈಟಿ,ಪದಾಧಿಕಾರಿಗಳಾದ ರಮೇಶ ಕಾಳನ್ನವರ,ಸುಧಾಕರ ಪಾಟೀಲ, ಪ್ರಶಾಂತ ಹುಕ್ಕೇರಿ,ಹಾಲಪ್ಪ ಮಾದಪ್ಪಗೋಳ, ಅಮೀತ ಬಾಗಿ ಈರಣ್ಣ ಈಟಿ ಲಕ್ಷ್ಮಣ ಖಗ್ಗೆನ್ನವರ,ಸಂಗಮೇಶ ಪೂಜೇರಿ,ಮಂಜು ಸಾಜನೆ,ಶೈಲಾ ಸಾರಾಪೂರೆ ಸೇರಿದಂತೆ ಪಟ್ಟಣದ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.