ದಲಿತ ಪೊಲೀಸನ ಮದುವೆ ಮೆರವಣಿಗೆ ತಡೆದವರು ಅಂದರ್ !!


ಜೋಧಪುರ: ದಲಿತ ಪೊಲೀಸ್ ಸಿಬ್ಬಂದಿಯೊಬ್ಬನ ಮದುವೆ ಮೆರವಣಿಗೆಗೆ ತಡೆಯೊಡ್ಡಿದ ಪ್ರಸಂಗ ದುಗಾರ ಗ್ರಾಮದಲ್ಲಿ  ನಡೆದಿದೆ.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮತ್ತಷ್ಟು ಜನರಿಗಾಗಿ ಹುಡುಕಾಟ ನಡೆಸಿದ್ದಾರೆ.

ತನ್ನ ಮದುವೆ ಮೆರವಣಿಗೆ ದುಗಾರ ಗ್ರಾಮವನ್ನು ಇನ್ನೇನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಕೆಲವರು ಅದಕ್ಕೆ ತಡೆ ಒಡ್ಡಿದರು ಎಂದು ಮದುಮಗ ಸವಾಯಿ ರಾಂ ತಿಳಿಸಿದ್ದಾರೆ.

ರಜಪೂತ ಸಮುದಾಯದ ಕೆಲವು ಮೆರವಣಿಗೆಗೆ ತಡೆ ಒಡ್ಡಿದರು ಎಂದೂ ಆತ ದೂರಿದ್ದಾರೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ಉಂಟಾಗಿ ಹರಿತ ಆಯುಧಗಳನ್ನು ಬಳಸಿ ಇರಿದಿದ್ದರಿಂದ ಕೆಲವರಿಗೆ ಗಾಯಗಳೂ ಆಗಿವೆ.

ಘಟನೆ ಸಂಬಂಧ ಮದುಮಗನ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, 12 ಜನರ ವಿರುದ್ದ ಪ್ರಕರಣ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published.