ಜಾರಕಬಂಡೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು, 40 ಎಕರೆ ಪ್ರದೇಶದಲ್ಲಿ ಧಗ ಧಗ ಉರಿ !


ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು 277 ಕಾರುಗಳು ಸುಟ್ಟು ಭಸ್ಮವಾಗಿರುವ ಘಟನೆ ಇನ್ನೂ ಮಾಸದಿರುವ ಮುನ್ನವೇ ಇಂದು ವಾಯುನೆಲೆ ಹಿಂಭಾಗದ ಜಾರಕಬಂಡೆ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಸಂಭವಿಸಿದೆ.

ವಾಯುನೆಲೆಯ ಹಿಂಭಾಗದಲ್ಲಿರುವ ಜಾರಕಬಂಡೆಯ ಸುಮಾರು 40 ಎಕರೆ ಪ್ರದೇಶದಲ್ಲಿ ಬೆಂಕಿ ಹೊತ್ತಿ ಧಗಧಗನೇ ಉರಿಯುತ್ತಿದ್ದು, ಬೆಂಕಿ ನಂದಿಸಲು ಅಗ್ನಿಶಾಸಮಕ ದಳದ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ.

ವಾಯುನೆಲೆ ಹಿಂಭಾಗದ ಆರ್ ಟಿ ಓ ಕಚೇರಿ ಬಳಿ ಈ ಅವಘಡ ಸಂಭವಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕಾರು ಸುಟ್ಟು ಭಸ್ಮವಾದ ಪ್ರಕರಣಕ್ಕೆ ಏನು ಕಾರಣ ಎಂಬುದೂ ಇನ್ನೂ ಗೊತ್ತಾಗಿಲ್ಲ. ಈ ನಡುವೆ ಅರಣ್ಯ ಪ್ರದೇಶಕ್ಕೆ ಯಾರು ಬೆಂಕಿ ಇಟ್ಟರು ಎಂಬುದೂ ಇನ್ನೂ ಗೊತ್ತಾಗಿಲ್ಲ.

Leave a Reply

Your email address will not be published.