ಗೋಕಾಕ: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ತೆಂಗಿನಮರ, ತಪ್ಪಿದ ಭಾರೀ ಅನಾಹುತ !!


ಗೋಕಾಕ: ಪಟ್ಟಣದ ವಾಲ್ಮೀಕಿ ಕ್ರೀಡಾಂಗಣದ ಬಳಿ ಇರುವ ಬಾರ್ ಒಂದರ ಮುಂದಿನ ತೆಂಗಿನಮರಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಪ್ರಸಂಗ ನಿನ್ನೆ ತಡರಾತ್ರಿ ನಡೆದಿದೆ.

ವಿದ್ಯುತ್ ಕಂಬದಲ್ಲಿ ಉಂಟಾದ ಶಾರ್ಟ್ ಸರ್ಕೀಟ್ ನಿಂದಾಗಿ ಈ ಅವಘಡ ಸಂಭವಿಸಿದ್ದು, ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿಸಿದ್ದಾರೆ.

Leave a Reply

Your email address will not be published.