ಎಡದಂಡೆ ಮುಖ್ಯ ಕಾಲುವೆಗೆ ರಂಧ್ರ : ಅಕ್ರಮವಾಗಿ ಪಂಪಸೆಟ್ ಗಳಿಂದ ನೀರಿಗೆ ಕನ್ನ

ಎಡದಂಡೆ ಮುಖ್ಯ ಕಾಲುವೆಗೆ ರಂಧ್ರ : ಅಕ್ರಮವಾಗಿ ಪಂಪಸೆಟ್ ಗಳಿಂದ ನೀರಿಗೆ ಕನ್ನ


ಕ್ರಮಕ್ಕೆ ಮುಂದಾಗದ ನೀರಾವರಿ ಇಲಾಖೆ | ಗಂಗಾವತಿ ತಾಲೂಕಿನಲ್ಲಿ ಕಾಲುವೆಗಳಿಗೆ ಪೈಪಲೈನ್

ಕೊಪ್ಪಳ ಭಾಗದ ಕೊಪ್ಪಳ, ರಾಯಚೂರ ಮತ್ತು ಬಳ್ಳಾರಿ ತ್ರಿವಳಿ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೀರನ್ನೆ ನಂಬಿಕೊಂಡು ಆ ಭಾಗದ ಲಕ್ಷಾಂತರ ಜನ್ರು ಜೀವನ ಮಾಡ್ತಿದ್ದಾರೆ. ಆದರೆ ಅಕ್ರಮವಾಗಿ ಪ್ರಭಾವಿ ರಾಜಕಾರಣಿಗಳು, ಜಮೀನ್ದಾರರು ಅಧಿಕಾರಿಗಳ ಕುಮ್ಮುಕ್ಕನಿಂದ ಎಡದಂಡೆ ಮುಖ್ಯ ಕಾಲುವೆಗೆ ರಂದ್ರ ಕೊರೆದು ಪೈಪಲೈನ್ ಮೂಲಕ ನೀರನ್ನು ಖದಿಯುತ್ತಿರುವುದು ಬೆಳಕಿಗೆ ಬಂದಿದೆ.

ಪ್ರತಿ ವರ್ಷ ಸರ್ಕಾರದ ಮತ್ತು ನೀರಾವರಿ ಇಲಾಖೆಯ ನಿಯಾಮಾವಳಿ ಮೀರಿ, ಕಾನೂನುಬಾಹಿರವಾಗಿ ಹಾಡುಹಗಲೇ ಕಾಲುವೆಗಳಿಂದ ನೀರು ಖದಿಯುತ್ತಿದ್ದರು ಸಹ ಯಾಕೇ ನೀರಾವರಿ ಇಲಾಖೆ ಅಧಿಕಾರಿಗಳು ಮೌನವಾಗಿದ್ದಾರೆ ಎನ್ನುವ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ, ಅಲ್ಲದೇ ಯಾವುದೇ ಕ್ರಮಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು ವರ್ಷಗಳಿಂದ ಕಾಲುವೆಯ ಒಳಗಡೆ ಪೈಪ್ ಹಾಕಿ ನೀರು ಕದಿಯುತ್ತಿರುವದರಿಂದ ಕೆಳ ಭಾಗದ ರೈತರಿಗೆ ಸರಿಯಾಗಿ ನೀರು ಸಿಗ್ತಾ ಇಲ್ಲ. ಇದಕ್ಕಾಗಿ ಹಲವು ಸಾರಿ ಗೊಂದಲ, ಹೋರಾಟಗಳು ನಡೆದು ಹೋಗಿವೆ, ಪ್ರಸ್ತುತ ತುಂಗಭದ್ರಾ ಡ್ಯಾಂನಲ್ಲಿ ಕೇವಲ ೧೭ ಟಿಎಂಸಿ ನೀರು ಇದ್ದು, ಎರಡನೇ ಬೆಳಗೆ ನೀರು ಬಿಡೋದನ್ನು ಸಹ ಸ್ಥಗಿತಗೊಳಿಸಲಾಗಿದೆ.

ಜಲಾಶಯದ ಎಡದಂಡೆ ಕಾಲುವೆಗೆ ಡ್ಯಾಂನಿಂದ ನೀರು ಬಿಟ್ರೆ ಅದೇಷ್ಟೋ ರೈತರ ಬದಕು ಹಸನಾಗುತ್ತೆ. ಆದ್ರೆ ಇದೀಗ ನೀರಾವರಿ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕಿನಿಂದ ಪ್ರಭಾವಿ ಜಮೀನು ಮಾಲಿಕರು ಕಾಲುವೆಗೆ ಕನ್ನ ಹಾಕಿದ್ದು, ಎಡದಂಡೆ ಮುಖ್ಯ ಕಾಲುವೆಗೆ ರಂಧ್ರ ಹಾಕಿ ನೂರಾರು ಪಂಪ್ ಸೆಟ್ ಗಳ ಮೂಲಕ ನೀರು ಕದಿಯುತ್ತಿದ್ದರು ಸಹ ಸಂಬಂಧಿಸಿದ ಅಧಿಕಾರಿಗಳು ಬಾಯಿಬಿಡುತ್ತಿಲ್ಲ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವ್ಯಾಪ್ತಿಯ ಸಾಣಾಪುರ, ಸಿದ್ದಿಕೇರಿ, ದಾಸನಾಳ್, ಆರ್ಹಾಳ್ ಗ್ರಾಮಗಳ ಮೂಲಕ ಹಾದುಹೋಗುವ ತುಂಗಾಭದ್ರ ಜಲಾಶಯದ ಎಡದಂಡೆ ಕಾಲುವೆಗೆ ಕೆಲ ಪ್ರಭಾವಿ ಜಮೀನ್ದಾರರು ಕೆನಾಲ್ ಒಳಗಿನಿಂದ ರಿಗ್ ಮೋಟಾರ್ ಗಳ ಮೂಲಕ ನೀರು ಕಳ್ಳತನ ಮಾಡುತ್ತಿದ್ದು, ಮುಖ್ಯ ಕಾಲುವೆಗೆ ಒಳಗಿನಿಂದಲೆ ಬೋಂಗಾ ಕೊರೆದು ಮೋಟಾರ್ ಅಳವಡಿಸಿರುವುದು ಕಂಡುಬಂದಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇದೀಗ ಕಾಲುವೆ ಖಾಲಿ-ಖಾಲಿಯಾಗಿದ್ದು ಇದರಿಂದ ಕಾಲುವೆ ಒಳಗಡೆ ಕೆಲ ಪ್ರಭಾವಿಗಳು ನೀರಾವರಿ ಇಲಾಖೆ ಅಧಿಕಾರಿಗಳು ಸಹಕಾರದಿಂದ ಅಕ್ರಮವಾಗಿ ಎಡದಂಡೆ ಕಾಲುವೆಗೆ ರಂಧ್ರ ಕೊರೆದು ಕಳ್ಳತನದಿಂದ ನೀರನ್ನು ಖದಿಯುತ್ತಿರುವುದು ಬಯಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನೆವಾಗಿಲ್ಲ, ಹಾಗೂ ಈ ಬಗ್ಗೆ ಸಾಕಷ್ಟು ದೂರುಗಳು ಇದ್ದರೂ ಕ್ರಮಕ್ಕೆ ಮುಂದಾಗದಿರುವದರಿಂದ ಇಂದಿಗೂ ಹತ್ತು ಹಲವು ಸಮಸ್ಯೆಗಳಿಂದ ಜಲಾಶಯದ ವ್ಯಾಪ್ತಿಯ ರೈತರು ಸಮಸ್ಯೆಗೆ ಒಳಗಾಗಿರುವುದಂದತು ಸತ್ಯ ಸಂಗತಿ.

ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬರಗಾಲದ ಛಾಯೆ ಆವರಿಸಿರುವುದರಿಂದ ಕುಡಿವ ನೀರು ಒದಗಿಸುವ ಸಲುವಾಗಿ ನೀರನ್ನು ಹಿಡಿಸಿಟ್ಟುಕೊಳ್ಳಲಾಗಿದೆ. ತುಂಗಭದ್ರಾ ಜಲಾಶಯ ಮಂಡಳಿ ಇನ್ನು ಕೆಲವೇ ದಿನಗಳಲ್ಲಿ ಕುಡಿಯೋ ನೀರು ಸಲುವಾಗಿ ಜಲಾಶಯದ ಎಡದಂಡೆ, ಬಲದಂಡೆ ಕಾಲುವೆಗೆ ನೀರು ಬೀಡಲಾಗುತ್ತದೆ. ಇದಕ್ಕೂ ಹೊಂಚು ಹಾಕಿರೋ ಪ್ರಭಾವಿಗಳು ಕುಡಿಯೋ ನೀರನ್ನು ಕದ್ದು, ಭತ್ತ ಬೆಳೆಯಲು ಸಿದ್ದರಾಗಿದ್ದಾರೆ ಎಂದು ಸ್ಥಳೀಯರಾದ ಸುದರ್ಶನ್ ತಾಂದಾಳೆ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರುವರು.

ರೈತರಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯಲು ಬಿಟ್ಟ ತುಂಗಭದ್ರಾ ನೀರು ಪ್ರಭಾವಿಗಳ ಜಮೀನು ಸೇರುತ್ತಿದ್ದು, ಇದರಿಂದ ಕೊಪ್ಪಳದ ಕೊನೆ ಭಾಗ ಹಾಗೂ ರಾಯಚೂರು ಜಿಲ್ಲೆಯ ಜನರು ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಕಾಲುವೆ ತಳ ಭಾಗದಿಂದ ಕುಡಿವ ನೀರಿಗೆ ಕನ್ನ ಹಾಕುವ ಪ್ರಭಾವಿಗಳು ವಿರುದ್ದ ಈಗಾಲಾದ್ರೂ ಜಿಲ್ಲಾಡಳಿತ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಾರೂ ಹೇಗೆ ಕಾದು ನೋಡಬೇಕು.

@ ಮೌಲಾಹುಸೇನ ಬುಲ್ಡಿಯಾರ್, ಕೊಪ್ಪಳ

Leave a Reply

Your email address will not be published.