ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಸೌಲಭ್ಯ ಸಿಗಬೇಕು ಸಚಿವ ಶಿವಾನಂದ ಪಾಟೀಲ ಅಭಿಮತ


-ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಕೊಪ್ಪಳಕ್ಕೆ ಮಹತ್ವ ಬಂದಿದೆ – ಜಗದೀಶ್ ಶೆಟ್ಟರ್

– ಕೊಪ್ಪಳದಲ್ಲಿ ಅತ್ಯಾಧುನಿಕ ಸೌಲಭ್ಯದ ವಿಶ್ವದರ್ಜೆ ಆಸ್ಪತ್ರೆ ಪ್ರಾರಂಭ

ಕೊಪ್ಪಳ: ಮೆಡಿಕಲ್ ಕಾಲೇಜುಗಳು ಕೇವಲ ಬೆಂಗಳೂರು ನಂತಹ ನಗರಗಳಿಗೆ ಸಿಮೀತವಾಗಿದ್ದವು ಇಂದು ಹಿಂದುಳಿದ ಪ್ರದೇಶಗಳಲ್ಲಿಯೂ ಸ್ಥಾಪನೆ ಆಗಿರುವದರಿಂದ ಆರೋಗ್ಯ ಕ್ಷೇತ್ರದಲ್ಲಿ ಒಂದು ಬೆಳವಣಿಗೆ ಮೈಲುಗಲ್ಲು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಡಾ.ಕೆ.ಬಸವರಾಜ ಅವರ ವಿಶ್ವದರ್ಜೆಯ ಅತ್ಯಾಧುನಿಕ ಸೌಲಭ್ಯಗಳುಳ್ಳ ಹಾಗೂ ಒಂದೇ ಸಂಕೀರಣದಲ್ಲಿ ಎಲ್ಲಾ ಸೌಲಭ್ಯಗಳ ಸುಸಜ್ಜಿತವಾದ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯರನ್ನು ತಯಾರು ಮಾಡಲಾಗುತ್ತದೆ, ಜೊತೆಗೆ ಜನರಿಗೂ ಚಿಕಿತ್ಸೆ ಸೌಲಭ್ಯ ಸಿಗಲಿದ್ದು ಇದಕ್ಕೆ ನಾವೇಲ್ಲಾ ಸರ್ಕಾರದ ಕ್ರಮಕ್ಕೆ ಕ್ಕೆ ಅಭಿನಂದನೆಗಳನ್ನು ಹೇಳಬೇಕಾಗುತ್ತದೆ ಎಂದರು.

ಕೆಲವೇ ಕೆಲ ವೈದ್ಯರು ಹಣ ಮಾಡುವದಕ್ಕಾಗಿ ಈ ವೃತ್ತಿಯನ್ನು ಬಳಸಿಕೊಳ್ಳಲಾಗುತ್ತದೆ ಇದು ನಿಲ್ಲಬೇಕು, ವ್ಯದ್ಯರಲ್ಲಿ ಸೇವಾ ಮನೋಭಾವ ಮುಖ್ಯವಾಗಿದೆ ಸರ್ಕಾರ ಇಲಾಖೆಗೆ ಹತ್ತು ಸಾವಿರ ಕೋಟಿ ಹಣ ಖರ್ಚು ಮಾಡಲಾಗುತ್ತದೆ, ಇಲಾಖೆಯಲ್ಲಿ ಸುಧಾರಣೆ ತರಲಾಗಿದೆ, ಆಯುಷ್ಮಾನ ಭಾರತ, ಹಾಗೂ ಆರೋಗ್ಯ ಕರ್ನಾಟಕ ಯೋಜನಗಳು ಇವೆ, ಇವು ಬಡ ಬಡ ಜನರಿಗೆ ಅತ್ಯಂತ ಉಪಯುಕ್ತವಾಗಿವೆ, 2030 ರ ಒಳಗಾಗಿ ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸಿಗಲಿ ಎಂದು ಕೇಂದ್ರ ರಾಜ್ಯ ಸರ್ಕಾರ ಗಳು ಶ್ರಮಿಸುತ್ತಿವೆ ಎಂದು ಹೇಳಿದರು.

ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಮಹತ್ವ ಬಂದಿದೆ

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾನಾಡಿ, ಕೊಪ್ಪಳ ಸೇರಿದಂತೆ ಇತರೆಡೆ ಆರು ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿತ್ತು, ಕೊಪ್ಪಳಕ್ಕೆ ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಹೆಚ್ಚು ಮಹತ್ವ ಬಂದಿದೆ ಎಂದರು.

ಜನರ ಆರೋಗ್ಯ ಬಹು ಮುಖ್ಯವಾಗಿದೆ, ಇದು ಅಭಿವೃದ್ಧಿ ದೃಷ್ಠಿಯಿಂದ ಅತ್ಯಂತ ಪ್ರಮುಖವಾಗಿದ್ದು, ಇದರಲ್ಲಿ ಕೇವಲ ಸರ್ಕಾರಗಳ ಪಾತ್ರವಿಲ್ಲ, ಜನಸಮುದಾಯದ ಭಾಗಿತ್ವ, ಅರಿವು ಕೂಡ ಅಷ್ಟೇ ಮುಖ್ಯವಾಗಿದೆ, ಆರೋಗ್ಯ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಸುಧಾರಣೆಗಳಾಗಬೇಕಾಗಿದ್ದು, ಗ್ರಾಮೀಣ ಭಾಗದಲ್ಲಿ ಇಂತಹ ಮಹತ್ವದ ಹಾಗೂ ಅತ್ಯಾಧುನಿಕ ಆಸ್ಪತ್ರೆಯಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗಲಿದೆ ಎಂದರು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಎಲ್ಲರಿಗೂ ಸಿಗಬೇಕು -ಸಚಿವ ನಾಡಗೌಡ : ಜನರಿಗೆ ಸುಲಭವಾಗಿ ಶಿಕ್ಷಣ ಹಾಗೂ ಆರೋಗಹ್ಯ ಈ ಎರಡು ಕ್ಷೇತ್ರಗಳು ಸುಲಭವಾಗಿ ಸಿಗುವಂತಗಬೇಕೆಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಸೇವೆ ಮಾಡುವ ವೈದ್ಯರು ವಿರಳ, ಡಾಕ್ಟರ್ ಮೇಲೆ ರೋಗಿ ನಂಬಿಗೆ ಇಡಬೇಕು ಅವಾಗ ಅರ್ಧ ಆರಾಮ, ಯಾರು ಹಣತೆಗೆದು ಕೊಳ್ಳುತ್ತಾರೆ ಅವರು ಒಳ್ಳೆಯವರು ಎನ್ನುವ ಭಾವನೆ ಜನರಲ್ಲಿದೆ. ಮನುಷ್ಯನಿಗೆ ಶಿಕ್ಷಣ ಮತ್ತು ಆರೋಗ್ಯ ಬಹಳ ಮುಖ್ಯ, ಆರೋಗ್ಯ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಅಮರೇಗೌಡ ಬಯ್ಯಾಪೂರ, ಮಾಜಿ ಸಂಸದ ಶಿವರಾಮೆ ಗೌಡ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಅಭಿನವ ಗವಿಸಿದ್ದೇಶ್ವರ ಸ್ವಾಮಿ, ನಿಡಶೇಸಿಯ ಚನ್ನಮಲ್ಲ ಸ್ವಾಮೀಜಿ ಮಾಜಿ ಶಾಸಕರಾದ ಶ್ರೀಶೈಲಪ್ಪ ಬಿದರೂರ, ಮಲ್ಲಿಕಾರ್ಜುನ ನಾಗಪ್ಪ, ಕೆ.ಶರಣಪ್ಪ, ವಿರುಪಾಕ್ಷಪ್ಪ ಅಗಡಿ, ವೈದ್ಯರಾದ ಡಾ.ಕೆ.ಜಿ.ಕುಲಕರ್ಣಿ, ಡಾ.ಎಂ.ಬಿ.ರಾಂಪೂರ, ಮಾಲತಿ ನಾಯಕ, ನವೀನ್ ಗುಳಗಣ್ಣನವರ್, ಮುತ್ತುರಾಜ ಕುಷ್ಟಗಿ, ಸಿ.ವಿ.ಚಂದ್ರಶೇಖರ, ಚಂಚಂದ್ರಶೇಖರ ಹಲಗೇರಿ ಇತರರು ಇದ್ದರು.

 

Leave a Reply

Your email address will not be published.