ಮೋದಿ ಸುಳ್ಳಿಗೆ ಮತ್ತೆ ಮಾರು ಹೋಗದಿರಿ, ಜ್ಯಾತ್ಯಾತೀತ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ: ಸಚಿವ ಸತೀಶ ಜಾರಕಿಹೊಳಿ ಕರೆ

ಮೋದಿ ಸುಳ್ಳಿಗೆ ಮತ್ತೆ ಮಾರು ಹೋಗದಿರಿ, ಜ್ಯಾತ್ಯಾತೀತ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ: ಸಚಿವ ಸತೀಶ ಜಾರಕಿಹೊಳಿ ಕರೆ


ಚಾಮರಾಜನಗರ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಲು  ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರು ಕರೆ ನೀಡಿದರು.

ಇಲ್ಲಿನ  ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ  ಗುರುವಾರ ಮಾತನಾಡಿದ  ಅವರು,  ಚಾಮರಾಜನಗರದಲ್ಲಿ ಈಗಾಗಲೇ ಕಾಂಗ್ರೆಸ್ ಸಂಸದರು ಇದ್ದಾರೆ. ಮುಂದಿನ ಚುನಾಚವಣೆಯಲ್ಲಿಯೂ  ಈ ಕ್ಷೇತ್ರವನ್ನು ಉಸಿಕೊಳ್ಳಬೇಕು.  ಕಾರ್ಯಕರ್ತರು ಮನೆ ಮನಗೆ ಹೋಗಿ ಪ್ರಾಮಾಣಿಕ ಪ್ರಯತ್ನ ಮಾಡಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಟಗೊಳಿಸಬೇಕು.  ಪಕ್ಷದ ಶಾಸಕರು ಕೂಡ ಕಾರ್ಯಕರ್ತರಿಗೆ ಸಲಹೆಗಳನ್ನು ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು.

ಮೋದಿ ಸುಳ್ಳಿಗೆ ಮಾರು ಹೋಗಬೇಡಿ:

ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಧಾನಿ ಮೋದಿ ನೇತೃತ್ವದ ಸರಕಾರ ಮಾಡಿದ ಕೆಲಸಗಳನ್ನು ನಾವು ನೋಡಿದ್ದೇವೆ. ಸುಳ್ಳು ಭಾಷಣಗಳನ್ನು ಹೇಳಿ ಜೇಸ್ ಮಾಡಲು ಬರುತ್ತಾರೆ. ಮತ್ತೆ ಮೋದಿ ಸುಳ್ಳು ಭಾಷಣಕ್ಕೆ ಮಾರು ಹೋಗದಿರಿ. ದೇಶದ ಪರವಾಗಿ, ರಾಜ್ಯದ ಪರವಾಗಿ ಇರುವ ಜ್ಯಾತ್ಯಾತೀತ  ಕಾಂಗ್ರೆಸ್ ಪಕ್ಷವನ್ನು ನಾವೆಲ್ಲರೂ ಬೆಂಬಲಿಸೋಣ ಎಂದು ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದರು.

ಚಾಮರಾಜನಗರ ಅತೀ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಯಾಗಿದ್ದು, ಅಧಿಕಾರದಲ್ಲಿ ಇದ್ದಾಗಲು, ಇಲ್ಲದಾಗಲು ನಾನು ಇಲ್ಲಿಗೆ ಭೇಟಿ ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದೇನೆ. ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಸಂಬಂಧ ಹಲವು ಸಮಸ್ಯೆಗಳಿವೆ. ಹಂತ ಹಂತವಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳೋಣ, ಸಮಸ್ಯೆಗಳ ಪರಿಹಾರಕ್ಕೆ ನೀವು ಕೂಡ ಸಲಹೆಗಳನ್ನು ನೀಡುವಂತೆ ಸತೀಶ ಜಾರಕಿಹೊಳಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ದೃವನಾರಾಯಣ, ಕೃಷ್ಣಮೂರ್ತಿ, ಜಯಣ್ಣ ಸೇರಿದಂತೆ ಜನಪ್ರತಿನಿಧಿಗಳು ನೂರಾರು ಕಾರ್ಯಕರ್ತರು  ಭಾಗಿಯಾಗಿದ್ದರು.

Leave a Reply

Your email address will not be published.