ಶಾಸಕನಾಗುತ್ತೇನೆ ಎಂದು ಕನಸಿನಲ್ಲು ಅಂದುಕೊಂಡಿರಲಿಲ್ಲ:ಆನಂದ ನ್ಯಾಮಗೌಡ


ಜಮಖಂಡಿ:ಕ್ಷೆತ್ರದಲ್ಲಿ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡುವ ಮೂಲಕ ಜನತೆಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ಲೋಕೊಪಯೋಗಿ ಇಲಾಖೆಯಿಂದ 2018-19ರ ಟಿ.ಎಸ್.ಪಿ ಯೋಜನೆಯಡಿಯಲ್ಲಿ ಎಸ್.ಟಿ ಕಾಲನಿಯಲ್ಲಿ ಅಂದಾಜು 24ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಾನು ಶಾಸಕನಾಗುತ್ತೇನೆ ಎಂದು ಕನಸಿನಲ್ಲು ಅಂದುಕೊಂಡಿರಲಿಲ್ಲ? ಆದರೇ ವಿಧಿಯಾಟಕ್ಕೆ ನಮ್ಮ ತಂದೆ ಹಿಂದಿನ ಶಾಸಕ ದಿ. ಸಿದ್ದು ನ್ಯಾಮಗೌಡರ ಅಕಾಲಿಕ ನಿಧನದಿಂದ ಮತ್ತೆ ಉಪಚುನಾವನೆ ನಡೆಯುವಾಗ ಪಕ್ಷದ ವರಿಷ್ಠರು ಈ ಬಾರಿ ನಿವೇ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎಂದಾಗ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸಿ ನಿವೆಲ್ಲರೂ ನನ್ನನ್ನು 40ಸಾವೀರ ಮತಗಳ ಅಂತರದಿಂದ ಗೆಲ್ಲಿಸಿದಕ್ಕಾಗಿ ನಿಮಗೆಲ್ಲರಿಗೂ ನಾನು ಚಿರವೃಣಿ ಎಂದರು.

ಇದೆ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇದ್ದರು.

ಗ್ರಾಮಕ್ಕೆ ಅಗಮಿಸಿದ ಶಾಸಕರಿಗೆ ಗ್ರಾಮದ ಮುತ್ತೈದೆಯರು ಆರತಿ ಮಾಡಿ ಸ್ವಾಗತಿಸಿ ಗಮನ ಸೆಳೆದರು.

Leave a Reply

Your email address will not be published.