ಸತೀಶ ಜಾರಕಿಹೊಳಿ ಜೊತೆ ಅಥಣಿ ಶಾಸಕ ಮಹೇಶ ಕುಮಠಳ್ಳಿ..!


ಬೆಳಗಾವಿ: ಅತೃಪ್ತರ ಗುಂಪಲ್ಲಿ ಕಾಣಿಸಿಕೊಂಡಿದ್ದ ಅಥಣಿ ಕಾಂಗ್ರೆಸ್ ಶಾಸಕ ಮಹೇಶ ಕುಮಠಳ್ಳಿ ಇಂದು ಸಚಿವ ಸತೀಶ ಜಾರಕಿಹೊಳಿ ಜೊತೆ ಕಾಣಿಸಿಕೊಂಡಿದ್ದು ಅಸಮಾಧಾನ ಬಗೆಹರಿದಿರುವ ಸಂದೇಶ ನೀಡಿದ್ದಾರೆ. 

ಕಳೆದ ಹಲವು ದಿನಗಳಿಂದ ಕ್ಷೇತ್ರಕ್ಕೆ ಬಾರದೆ  ಫೆ. 13 ರಂದು ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿದ್ದ ಶಾಸಕರು ಇಂದು ಬೆಳಗಾವಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಚಿವ ಸತೀಶ ಜಾರಕಿಹೊಳಿ ಜೊತೆ ಭಾಗವಹಿಸಿ ನಂತರ ಅವರ ಸರ್ಕಾರಿ ವಾಹನದಲ್ಲಿ ತೆರಳಿದರು.  

ನಿನ್ನೆಯಷ್ಟೇ ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಬಿ. ನಾಗೇಂದ್ರ ಸಿದ್ಧರಾಮಯ್ಯರನ್ನು ಭೇಟಿಯಾಗಿದ್ದು ಅತೃಪ್ತರನ್ನು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ. 

Leave a Reply

Your email address will not be published.