ಮೋದಿ ಸಮ್ಮುಖದ ವೇದಿಕೆಯಲ್ಲೇ ಸಚಿವೆಯ ಸೊಂಟ ಬಳಸಿದ ಬಿಜೆಪಿ ಸಚಿವ : ವಿಡಿಯೋ ವೈರಲ್


ಅಗರ್ತಲಾ:ಪ್ರಧಾನಿ ನರೇಂದ್ರ ಮೋದಿ ಹಾಗೂ ತ್ರಿಪುರಾ ಮುಖ್ಯಮಂತ್ರಿ ವಿಪ್ಲ ದೇವ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಸಚಿವ ಮನೋಜಕಾಂತಿ ದೇವ್ ಅವರು ಸಮಾಜ ಕಲ್ಯಾಣ ಸಚಿವೆ ಸಂತಾನಾ ಚಕ್ಮಾ ಅವರ ಸೊಂಟ ಬಳಸಿದ ಪ್ರಸಂಗ ನಡೆದಿದ್ದು, ದೃಶ್ಯದ ವಿಡಿಯೋ ವೈರಲ್ ಆಗಿದೆ.

ಆಡಳಿತಾರೂಢ ಬಿಜೆಪಿ ಸಚಿವ ಈ ರೀತಿ ಮಹಿಳಾ ಸಚಿವೆಯ ಸೊಂಟ ಬಳಸುತ್ತಲೇ ಸಚಿವೆ ಅವರ ಕೈಯನ್ನು ಹಿಂದಕ್ಕೆ ತಳ್ಳಿರುವ ದೃಶ್ಯ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಆಡಳಿತಾರೂಢ ಬಿಜೆಪಿ ಸಚಿವರ ಈ ನಡೆ ಎಡಪಕ್ಷಗಳಲ್ಲಿ ಆಕ್ರೋಷ ಹುಟ್ಟುಹಾಕಿದ್ದು, ಸಚಿವ ಮನೋಜಕುಮಾರ್ ದೇವ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ.

ತ್ರಿಪುರಾದಲ್ಲಿ ಎಡ ಪಂಥೀಯ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದು, ಸಚಿವನ ರಾಜೀನಾಮೆಗೆ ಪಟ್ಟು ಹಿಡಿದಿವೆ. ಈ ಸಂಬಂಧ ಪ್ರತಿಕ್ರಿಯಿಸಲು ಮನೋಜ್​ ಕುಮಾರ್​ ದೇಬ್​ ನಿರಾಕರಿಸಿದ್ದಾರೆ.

ಎಡಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ತ್ರಿಪುರಾ ವಕ್ತಾರ ನಬೆಂದು ಚಟರ್ಜಿ ಅವರು ಸಚಿವೆ ಸಂತಾನಾ ಚಕ್ಮಾ ಅವರು ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ದೂರು ಸಹ ದಾಖಲಿಸಿಲ್ಲ. ಎಡಪಕ್ಷಗಳು ಏಕೆ ಬೊಬ್ಬೆ ಹೊಡೆಯುತ್ತಿವೆ ಎಂದು ಕೇಳಿದ್ದಾರೆ.

 

Leave a Reply

Your email address will not be published.