ತಳಕಟ್ನಾಳ-ಸವದತ್ತಿ ಹೊಸ ಬಸ್ ಪ್ರಾರಂಭ


ಗೋಕಾಕ : ತಳಕಟ್ನಾಳದಿಂದ ಸವದತ್ತಿಗೆ ತೆರಳುವ ಹೊಸ ಸಾರಿಗೆಯನ್ನು ಫೆ.15 ರಿಂದ ಸವದತ್ತಿ ಘಟಕದಿಂದ ಆರಂಭಿಸಲಾಗಿದೆ.

ತಳಕಟ್ನಾಳ ಗ್ರಾಮದಲ್ಲಿ ಸವದತ್ತಿ-ತಳಕಟ್ನಾಳ ಹೊಸ ಸಾರಿಗೆಗೆ ಶುಕ್ರವಾರದಂದು ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲು ಹೊಸ ಬಸ್ಸನ್ನು ಆರಂಭಿಸಲಾಗಿದೆ. ಹಣಮಂತ ಅಜ್ಜನ್ನವರ ಅವರು ಈ ಹೊಸ ಬಸ್ ಪ್ರಾರಂಭಿಸಲು ಸಾಕಷ್ಟು ಶ್ರಮಿಸಿದ್ದಾರೆ. ಈ ಬಸ್‍ನ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಹಣಮಂತ ಅಜ್ಜನ್ನವರ, ಗ್ರಾಪಂ ಅಧ್ಯಕ್ಷ ಅಪ್ಪಾಸಾಬ ನದಾಫ, ಪಿಕೆಪಿಎಸ್ ಅಧ್ಯಕ್ಷ ಗುರುಸಿದ್ಧ ಕಲ್ಲವ್ವಗೋಳ, ಲಕ್ಷ್ಮಣ ಅಜ್ಜನ್ನವರ, ನಿಂಗಪ್ಪ ದೊಡಮನಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ದುಂಡಪ್ಪ ಹುಲಕುಂದ, ರೇವಣ್ಣ ವಡೇರ, ಲಕ್ಷ್ಮಣ ನಂದಿ, ವಿರುಪಾಕ್ಷ ಮುಂಗರವಾಡಿ, ಮಹಾದೇವ ಗೋಡೇರ, ವಿಠ್ಠಲ ಕನೀಲ್ದಾರ, ಸಾರಿಗೆ ಅಧಿಕಾರಿಗಳು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published.