ಫೆ. 4 ರಂದು ಬೆಳಗಾವಿಯಲ್ಲಿ ಪಿಕೆಪಿಎಸ್ ನೌಕರರಿಂದ ಬೃಹತ್ ಸಮಾವೇಶ


ಬೆಳಗಾವಿ: ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಸೇರಿ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಫೆ. 4( ಸೋಮವಾರ) ರಂದಯ ಪಿಕೆಪಿಎಸ್ ವತಿಯಿಂದ ನಗರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪಿಕೆಪಿಎಸ್ ರಾಜ್ಯಾಧ್ಯಕ್ಷ ಡಿ.ಎಸ್ ಬಡಗುಗೌಡ್ರು ತಿಳಿಸಿದರು.

ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಹೋರಟ ಮಾಡಿಕೊಂಡು ಬಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸುವರ್ಣ ಸೌಧದಲ್ಲಿಯೂ ಧರಣಿ ನಡೆಸಿದರು ನಮ್ಮನ್ನಾಳು ರಾಜಕೀಯ ಪಕ್ಷಗಳು ಕಡೆಗಣಿಸುವೆ ರಾಜ್ಯ ಸರಕಾರದ ಗಮನ ಸೆಳೆಯಲು ಫೆ. 4 ರಂದು ನಗರದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಲಿಂಗರಾಜು ಕಾಲೇಜಿ ರಸ್ತೆ ಮೂಲಕ ಪಾದಯಾತ್ರೆ ಮೂಲಕ‌ ತೆರಳಿ ಸಹಕಾರ ಭವನಕ್ಕೆ ತೆರಳಿ ಮುತ್ತಿಗೆ ಹಾಕಲಾಗುವುದು ಬಳಿಕ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಪಿಕೆಪಿಎಸ್ ನೌಕರರು ಭಾಗಿಯಾಗಬೇಕುಎ ಮನನ ಎಂದು ತಿಳಿಸಿದರು.

ಪಿಕೆಪಿಎಸ್ ಜಿಲ್ಲಾಧ್ಯಕ್ಷ ಸಂಘಯ್ಯ ಹಿರೇಮಠ, ಶಿವಾನಂದ ಹುಕ್ಕೇರಿ, ಬದವರಾಜ ರಾಮನವರ ಇತರರು ಇದ್ದರು.

Leave a Reply

Your email address will not be published.