ರಫೆಲ್ ಒಪ್ಪಂದ ಮಾಹಿತಿ ಹೊರಹಾಕಿದ ಪ್ರಧಾನಿ ಮೋದಿ ದೇಶದ್ರೋಹಿ: ರಾಹುಲ ಕಿಡಿ


ಹೊಸದಿಲ್ಲಿ:ದೇಶದ ಭದ್ರತೆಗೆ ಸಂಬಂಧಿಸಿದ ಅಧಿಕೃತ ರಹಸ್ಯ ಕಾಯಿದೆಯನ್ನು ಉಲ್ಲಂಘಿಸಿ ರಪೇಲ್ ಒಪ್ಪಂದದ ಮಾಹಿತಿಯನ್ನು ಹೊರಹಾಕಿದ ಪ್ರಧಾನಿ ಮೋದಿ ದೇಶದ್ರೋಹ ಎಸಗಿದ್ದಾರೆ ಎಂದು ರಾಹುಲ ಗಾಂಧಿ ಆರೋಪಿಸಿದರು. 

ಇಂದು ಸುದ್ಧಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಫೆಲ್ ಒಪ್ಪಂದ ತಮ್ಮ ಪರವಾಗಿದೆ ಎಂದು ಹತ್ತು ದಿನಗಳ ಮೊದಲೇ ಅನಿಲ ಅಂಬಾನಿಗೆ ಗೊತ್ತಾಗಿತ್ತು ಎಂದು ಗಂಭೀರ ಆರೋಪ ಮಾಡಿದರು. 

ಈ ಕುರಿತು ಪುರಾವೆ ರೂಪದಲ್ಲಿ ರಾಹುಲ ಏರ್ ಬಸ್ ಅಧಿಕಾರಿಯೊಬ್ಬರ ಇ-ಮೇಲ್ ಪ್ರದರ್ಶಿಸಿ ಫ್ರಾನ್ಸ್ ದೇಶದ ರಕ್ಷಣಾ ಸಚಿವರ ಮುಂದೆ ಅನಿಲ ಅಂಬಾನಿ ರಪೇಲ್ ಒಪ್ಪಂದದ 10 ದಿನಗಳ ಮೊದಲೇ ಡೀಲ್ ಸಹಿ ಯಾಗಿದ್ದು ತಮಗೆ ಸಿಕ್ಕಿದೆ ಎಂದು ಹೇಳಿದ್ದಾರೆ ಎಂದರು. 

ಪ್ರಧಾನಿ ಮೋದಿ ಈ ಕುರಿತು ಜನರಿಗೆ ಉತ್ತರಿಸಬೇಕು. ದೇಶದ ರಕ್ಷಣಾ ಸಚಿವರಿಗೆ, ವಿದೇಶಾಂಗ ಸಚಿವರಿಗೆ ಮತ್ತು ಎಚ್ ಎ ಎಲ್ ಗೆ ರಫೆಲ್ ಒಪ್ಪಂದದ ಬಗ್ಗೆ ಇಲ್ಲದ ಮಾಹಿತಿ ಹೇಗೆ 10 ದಿನಗಳ ಮೊದಲೇ ಅನಿಲ ಅಂಬಾನಿಗೆ  ಇತ್ತು. ಅನಿಲ ಅಂಬಾನಿಯ ಏಜೆಂಟ್ ರಂತೆ ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ  ಎಂದು ಟೀಕಿಸಿದರು. 

ಇದು ದೇಶದ್ರೋಹ, ಗೂಢಾಚಾರಿಯ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ದೇಶದ ರಕ್ಷಣಾ ಮಾಹಿತಿಯನ್ನು ರಕ್ಷಿಸುವುದಕ್ಕೆ ಪ್ರಮಾಣ ಮಾಡಿ ದೇಶದ ಅಧಿಕೃತ ರಹಸ್ಯಗಳ ಕಾಯಿದೆಯನ್ನು ಉಲ್ಲಂಘಿಸಿ  ಬೇರೆಯೊಬ್ಬರಿಗೆ ತಿಳಿಸಿದ್ದಾರೆ ಎಂದು ಕಿಡಿಕಾರಿದರು. 

ಇದು ಸತ್ಯವಾದಲ್ಲಿ ಪ್ರಧಾನಿ ಮೋದಿ ದೇಶದ ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಅಧಿಕೃತ ಮಾಹಿತಿಯನ್ನು ಹೊರಹಾಕಿ ದೇಶದ್ರೋಹ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು. 

ಈ ಮೊದಲೆ ಸಿಎಜಿ ವರದಿಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ರಫೆಲ್ ಡಿಲ್ ತಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟ ಹೇಳಿದೆ.ಈಗ  ಸುಪ್ರೀಂ ಕೋರ್ಟಿನ ತೀರ್ಪುಪ್ರಶ್ನಿಸಲು ಮುಕ್ತವಾಗಿವೆ ಎಂದರು. 

ಭ್ರಷ್ಟಾಚಾರ, ಕಾರ್ಯವಿಧಾನ ಮತ್ತು ಈಗ ರಾಷ್ಟ್ರ ಭದ್ರತೆ ಈ ಮೂರು ಪ್ರಕರಣಗಳ ಮೇಲೆ ತನಿಖೆಯಾಗುತ್ತದೆ. ಒಬ್ಬರು ಉಳಿಯುವುದಿಲ್ಲ. ಸಿಎಜಿ ವರದಿಯನ್ನು ಚೌಕಿದಾರ ಆಡಿಟರ್ ರಿಪೋರ್ಟ್ ಎಂದು ವ್ಯಂಗ್ಯವಾಡಿದ ರಾಹುಲ ಇದು ನರೇಂದ್ರ ಮೋದಿ ವರದಿ. ಚೌಕಿದಾರಗಾಗಿ,  ಚೌಕಿದಾರಕ್ಕಾಗಿಯೇ ಚೌಕಿದಾರನಿಂದ ಬರೆಯಲಾಗಿದೆ ಎಂದರು. 

Leave a Reply

Your email address will not be published.