ವಿಡಿಯೋ: ನಾಯಕರು ಕುರುಬರು ಒಂದಾದರೇ ಸಿದ್ಧು, ಸತೀಶ ಇಬ್ಬರು ಸಿಎಂ ಆಗ್ತಾರೆ


ಸಿದ್ಧರಾಮಯ್ಯ ಸಿಎಂ ಆಗುವಾಗ ಜಾರಹೊಳಿ ಸಹಾಯ ಬಹಳ ಇತ್ತು ಎಂದ ಶ್ರೀಗಳು

ರಾಜನಹಳ್ಳಿ(ದಾವಣಗೆರೆ): ನಾಯಕರು ಮತ್ತು ಕುರುಬರು ಒಂದಾದರೇ ಸಿದ್ಧರಾಮಯ್ಯರನ್ನು ಸಿಎಂ ಮಾಡಬಹುದು   ಮತ್ತು ಸತೀಶ ಜಾರಕಿಹೊಳಿರನ್ನು ಮಾಡಬಹುದು ಎಂದು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಶಾಂತವೀರ ಮಹಾಸ್ವಾಮಿಗಳು ಹೇಳಿದರು. 

ಇಲ್ಲಿನ ವಾಲ್ಮೀಕಿ ಗುರುಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.  

ಈ ಹಿಂದೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಪಟ್ಟ ಸ್ವೀಕರಿಸಬೇಕ್ದರೆ ಸತೀಶ ಜಾರಕಿಹೊಳಿ ಅವರ ಸಹಾಯ ಇತ್ತು ಎಂದು ನಾವೆಲ್ಲರು ಒಪ್ಪಲೆಬೇಕು ಎಂದರು. 

ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು  ವಾಲ್ಮೀಕಿ ಮತ್ತು ಕುರುಬರು ಒಗ್ಗಟ್ಟಾದರೆ ಇದು ಸಾದ್ಯ. ಪ್ರಗತಿಪರರು ಮತ್ತು ಮೌಢ್ಯ ವಿರೋಧಿಗಳಾಗಿರುವ ಸತೀಶ ಜಾರಕಿಹೊಳಿ ಮತ್ತು ಸಿದ್ಧರಾಮಯ್ಯ ಇಬ್ಬರು  ಒಗ್ಗಟ್ಟಾಗಿಯೇ ಇದ್ದಾರೆ ಎಂದರು. 

Leave a Reply

Your email address will not be published.