ಕಾಂಗ್ರೆಸ್ ಬಂಡಾಯ ಶಮನವಾಗಿಲ್ಲ ಎಂದ್ರು ಸತೀಶ ಜಾರಕಿಹೊಳಿ !


ನಿಪ್ಪಾಣಿ: ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಇನ್ನೂ ಶಮನವಾಗಿಲ್ಲ. ಗೊಂದಲ ಇರುವುದು ಸರಕಾರದಲ್ಲಿ ಅಲ್ಲ, ಪಕ್ಷದಲ್ಲಿ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ನಿಪ್ಪಾಣಿಗೆ ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪಕ್ಷದ ವರಿಷ್ಠರು ಮತ್ತು ತಾವು ಸೇರಿ ಬಂಡಾಯವನ್ನು ಶಮನಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದಿಂದ ನಾಲ್ಕು, ಎಂಟು , ಹತ್ತು ಶಾಸಕರು ಹೋಗುತ್ತಾರೆ ಎಂದು ಹೇಳುವುದಕ್ಕಾಗುವುದಿಲ್ಲ.  ಪಕ್ಷದಲ್ಲಿನ ಗೊಂದಲ ನಿವಾರಣೆಯಾಗುವ ವಿಶ್ವಾಸವಿದೆ ಎಂದರು.

ಬಿಜೆಪಿ ನಿರಂತರವಾಗಿ ರೆಸಾರ್ಟ್ ರಾಜಕಾರಣ ಮಾಡುತ್ತಿದೆ. ನಾವು ಅಲರ್ಟ್ ಇರುವವರೆಗೆ ಯಾರಿಗೂ ಏನೂ ಆಗುವುದಿಲ್ಲ. ಬಿಜೆಪಿ ಆಪರೇಷನ್ ಕಮಲ ಇನ್ನೂ ನಾಲ್ಕು ವರ್ಷ ನಾಲ್ಕು ತಿಂಗಳು ನಡೆಯಲಿದೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರಕಾರದ ಬಜೆಟ್ ಚುನಾವಣೆ ಬಜೆಟ್. ಅದರಲ್ಲಿ ಪರಿಣಾಮಕಾರಿಯಾಗುವಂತ ಯಾವುದೇ ಯೋಜನೆಗಳಿಲ್ಲ ಎಂದು ಜಾರಕಿಹೊಳಿ ಟೀಕಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ # ನನ್ನ ಸಿಎಂ ಅಭಿಯಾನ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿಮಾನಿಗಳು ಉತ್ಸುಕತೆಯಿಂದ ಮಾಡ್ತಿದ್ದಾರೆ

ಸಾಮಾಜಿಕ ಜಾಲತಾಣಗಳಲ್ಲಿ ” ನಾನೇ ಸಿಎಂ ” ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ

ಅದು ಆಗ್ತಾನೆ ಇರುತ್ತೆ , ಅಭಿಮಾನಿಗಳು ಈ ತರಹ ಮಾಡ್ತಾನೆ ಇರುತ್ತಾರೆ. ಅದಕ್ಕಿನ್ನೂ ಸಾಕಷ್ಟು ಸಮಯಾವಕಾಶವಿದೆ ಎಂದರು.

Leave a Reply

Your email address will not be published.