ಸಿಎಂ ಮಮತಾ ಬೆನರ್ಜಿ ಪರ ಶಿವಸೇನೆ ಬ್ಯಾಟಿಂಗ್: ಬಿಜೆಪಿಯಿಂದ ಪ್ರತಿಷ್ಠೇಯನ್ನು ಕಳೆದುಕೊಂಡ ಸರ್ಕಾರಿ ಅಂಗಸಂಸ್ಥೆಗಳು ಎಂದು ಟೀಕೆ


 


ಮುಂಬಯಿ:  ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ದುರಾಡಳಿತದಿಂದ ಸರ್ಕಾರಿ ಅಂಗಸಂಸ್ಥೆಗಳು ಪ್ರತಿಷ್ಟೇಯನ್ನು ಕಳೆದುಕೊಡಿವೆ ಎಂದು ಬಿಜೆಪಿ ಮಿತ್ರ‌ಪಕ್ಷವೂ ಆದ ಶಿವಸೇನಾ ಆರೋಪಿಸಿದೆ.

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ವಿರುದ್ದ ಸಮರ ಸಾರಿರುವ ಮಮತಾ ಬೆನರ್ಜಿ ಪರ ಇಂದು ಬ್ಯಾಟ ಬಿಸಿರುವ ಶಿವಸೇನೆ ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸಿಬಿಐ, ಆರ್ ಬಿಐ, ನೀತಿಆಯೋಗಗವನನ್ನು ದುರುಪಯೋಗ ಪಡೆಸಿಕೊಂಡಿದ್ದರಿಂದ ಸರ್ಕಾರದ ಈ‌ ಅಂಗಸಂಸ್ಥೆಗಳು ತಮ್ಮ ಪ್ರತಿಷ್ಟೇ ಕಳೆದುಕೊಂಡಿವೆ ಎಂದು ಇಂದು ಶಿವಸೇನೆ‌ ಮುಖವಾಣಿ ಸಾಮ್ನಾದಲ್ಲಿ ಪ್ರಕಟಿಸಿದೆ.

ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಈ ಅಂಗಸಂಸ್ಥೆಗಳ ಪರಿಸ್ಥಿತಿ ಪಂಜರದಲ್ಲಿರುವ ಗಿಳಿಯಂತಾಗಿದೆ.  ಸಿಬಿಐ ಅರ್ಧ ಸತ್ತಂಗಾಗಿದೆ‌. ಇವುಗಳನ್ನು ನಂಬಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದೆ.

ಲೋಕಸಭಾ ಚುನಾವಣೆಗಾಗಿಯೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಜ್ಯ ಸರ್ಕಾರ ವಿರುದ್ಧ ಸಮರಕ್ಕೆ‌ ನಿಂತಿದೆ. ಸಿಬಿಐ ಮುಖ್ಯಸ್ಥ ರನ್ನು ಕೇಂದ್ರ ನೇಮಿಸಿದ ಕೆಲವೇ ಕ್ಷಣಗಳಲ್ಲಿ ಈ ದಾಳಿ ನಡೆದಿದೆ ಎಂದು ಟೀಕಿಸಿದೆ.  

Leave a Reply

Your email address will not be published.