ಶೋಭಾ ಕರಂದ್ಲಾಜೆ ಬ್ಯಾಂಕ್ ಖಾತೆಯಿಂದ 20 ಲಕ್ಷ ರೂ. ಲಪಟಾಯಿಸಿದ ಭೂಪರು !!


ಹೊಸದಿಲ್ಲಿ: ಸಂಸದೆ ಶೋಭಾ ಕರಂದ್ಲಾಜೆ ಅವರ ಬ್ಯಾಂಕ್ ಅಕೌಂಟನ್ನೇ ಹ್ಯಾಕ್ ಮಾಡಿರುವ ಖದೀಮರು ಅಂದಾಜು 20 ಲಕ್ಷ ರೂ. ಗಳನ್ನು ದೋಚಿದ್ದಾರೆ.

ಶೋಭಾ ಕರಂದ್ಲಾಜೆ ಅವರು ದೆಹಲಿಯ ಸಂಸತ್ ಭವನದ ಎಸ್ ಬಿ ಐ ನಲ್ಲಿ ಸ್ಯಾಲರಿ ಅಕೌಂಟ್ ಹೊಂದಿದ್ದರು, ಸಂಸದರ ಸಂಬಳ, ಭತ್ಯೆ ಈ ಅಕೌಂಟ್ ಗೆ ಜಮಾ ಆಗುತ್ತಿತ್ತು.

ಶೋಭಾ ಕರಂದ್ಲಾಜೆ ಅವರ ಮೊಬೈಲ್ ಗೆ ಮೆಸೇಜ್ ಬಂದಾಗಲೇ 20 ಲಕ್ಷ ರೂ. ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಕುರಿತಂತೆ ಸಂಸತ್ ಭವನದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಶೋಭಾ ಕರಂದ್ಲಾಜೆ ದೂರವಾಣಿ ಸಂಪರ್ಕಕ್ಕೂ ಲಭ್ಯರಾಗಿಲ್ಲ.

Leave a Reply

Your email address will not be published.