ಕಾಂಗ್ರೆಸ್ ಶಾಸಕರಿಗೆ 30 ಕೋಟಿ ಆಫರ್ ಕೊಟ್ಟಿದ್ದಾರೆ ಎಂದ್ರು ಸಿದ್ದರಾಮಯ್ಯ !ಬೆಂಗಳೂರು:ಸದ್ಯ ಸದನಕ್ಕೆ ಗೈರು ಹಾಜರಾಗಿರುವ ” ಕೈ ” ಶಾಸಕರು ನಾಳೆಯ ಶಾಸಕಾಂಗ ಪಕ್ಷದ ಸಭೆಗೆ ಬರುವ ವಿಶ್ವಾಸವಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ನಾನು ಆಶಾವಾದಿ. ಅತೃಪ್ತ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ. ಈಗಾಗಲೇ ವಿಪ್ ಜಾರಿಗೊಳಿಸಲಾಗಿದ್ದು, ಸಭೆಗೆ ಬಾರದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಅವರು ಕಲಾಪ ಮೊಟಕುಗೊಂಡ ನಂತರ ಮಾಧ್ಯಮಗಳಿಗೆ ತಿಳಿಸಿದರು.

ಆಪರೇಷನ್ ಪಕ್ಕಾ…

ದೋಸ್ತಿ ಸರಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್ ಕಮಲ ಮಾಡುತ್ತಿರುವುದು ಸತ್ಯ. ಕೆಲವು ಕೈ ಶಾಸಕರೂ ಹಣ ಪಡೆದುಕೊಂಡಿದ್ದಾರೆ. ಶಾಸಕರಿಗೆ ಬಿಜೆಪಿ 30 ಕೋಟಿ ರೂ. ಆಫರ್ ಕೊಟ್ಟಿದೆ. ಈ ಬಗ್ಗೆ ಎಲ್ಲ ಪುರಾವೆಗಳಿವೆ. ಸೂಕ್ತ ಸಮಯದಲ್ಲಿ ಅವುಗಳನ್ನು ಹೊರಹಾಕುತ್ತೇವೆ ಎಂದೂ ಮಾಜಿ ಸಿಎಂ ಹೇಳಿದರು.

Leave a Reply

Your email address will not be published.