ಯೋಧರ ತ್ಯಾಗದ ಮೇಲೆ ಸೀಟುಗಳ ಲೆಕ್ಕಾಚಾರ ಹಾಕಿದ ಯಡಿಯೂರಪ್ಪ ಚಳಿ ಬಿಡಿಸಿದ ಸಿದ್ಧುಬೆಂಗಳೂರು: ಪುಲ್ವಾಮಾದಲ್ಲಿ ಮಡಿದ ಯೋಧರ ಕುಟುಂಬದವರ ಕಣ್ಣೀರೂ ಇನ್ನು ನಿಂತಿಲ್ಲ ಆಗಲೇ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್. ಯಡಿಯೂರಪ್ಪ ಸೀಟುಗಳ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು  ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಟ್ವಿಟ್ಟರನಲ್ಲಿ ಕಿಡಿಕಾರಿರುವ ಸಿದ್ಧರಾಮಯ್ಯ  ಮಡಿದ ಯೋಧರನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿರುವ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಹುತಾತ್ಮರಾದ ವೀರಯೋಧರ ಶವಗಳನ್ನು ಮುಂದಿಟ್ಟುಕೊಂಡು ಚುನಾವಣಾ ಲಾಭದ ಕನಸು ಕಾಣುತ್ತಿರುವ  ಅವರ ರಾಜಕೀಯ ದುರಾಸೆಯ ಹೇಳಿಕೆಯನ್ನು ಖಂಡಿಸುತ್ತೇನೆ. ಮಡಿದ ಸೈನಿಕರ ಕುಟುಂಬದವರ ಕಣ್ಣೀರು ಇನ್ನೂ ನಿಂತಿಲ್ಲ, ಆಗಲೇ ಸೀಟುಗಳ ಲೆಕ್ಕಾಚಾರ ನಡೆದಿದೆ ಎಂದು ಕಿಡಿಕಾರಿದ್ದಾರೆ. 

ಮಡಿದ ಯೋಧರ ಮೇಲೆ‌ ಚುನಾವಣಾ ಹೇಳಿಕೆ ನೀಡಿದ ಯಡಿಯೂರಪ್ಪ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published.