ಅಂತಾರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಯಲ್ಲಿ ಬೆಳ್ಳಿ ತಂದ ಕನ್ನಡದ ಹುಡುಗಿ ಯಶಸ್ವಿನಿ!


ಬೆಂಗಳೂರು: ಇಲ್ಲಿಯ ಪ್ರತಿಷ್ಠಿತ ಜೆಎಸ್ ಎಸ್ ಪಬ್ಲಿಕ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ಯಶಸ್ವಿನಿ ಘೋರ್ಪಡೆ (14 ವರ್ಷ) ಇತ್ತೀಚೆಗೆ ಬಹರೇನ್ ನಲ್ಲಿ ನಡೆದ ಅಂತಾರಾಷ್ಟ್ರೀಯ  ಜ್ಯೂನಿಯರ್ ಮತ್ತು ಕೆಡೆಟ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ವೈಯಕ್ತಿಕ ಸ್ಪರ್ಧೆಯಲ್ಲಿ ಒಂದು ಬೆಳ್ಳಿ ಪದಕ ಹಾಗೂ ಗುಂಪುಸ್ರರ್ಧೆಯಲ್ಲಿಯೂ ಒಂದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾಳೆ.

ಅರ್ಹತಾ ಪಂದ್ಯಗಳಲ್ಲಿ ಯಶಸ್ವಿನಿ  ವಿಶ್ವದ ನಂ.9 ಮತ್ತು ನಂ 7 ಆಟಗಾರರನ್ನು ಹಿಂದಿಕ್ಕಿ ಜ್ಯೂನಿಯರ್ ಪಂದ್ಯದ ಕ್ವಾರ್ಟರ್ ಫೈನಲ್ ಕೂಡ ಪ್ರವೇಶಿಸಿದ್ದಳು.

ಸದ್ಯ ಭಾರತದ ನಂ3 ಸ್ಥಾನದಲ್ಲಿರುವ ಯಶಸ್ವಿನಿ ಇತ್ತೀಚೆಗೆ ಚಂಡೀಗಡದಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ (201) ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದಿದ್ದಳು.

ಯಶಸ್ವಿನಿ ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ನಿವೃತ್ತ ಉದ್ಯೋಗಿ  ಎಂ.ಡಿ. ಥೋರಲೆ ಅವರ ಮೊಮ್ಮಗಳು.

Leave a Reply

Your email address will not be published.