ನನ್ನದು ರೇಪ್ ಮಾಡಿಸಿಕೊಂಡ ಸಂತ್ರಸ್ಥೆಯ ಪರಿಸ್ಥಿತಿಯಾಗಿದೆ ಎಂದು ಸ್ಪೀಕರ್ ಹೇಳಿದ್ದೇಕೆ ಗೊತ್ತಾ?!


ಬೆಂಗಳೂರು: ” ನನ್ನ ಪರಿಸ್ಥಿತಿ ರೇಪ್ ಗೆ ಒಳಗಾದ ಸಂತ್ರಸ್ಥೆಯಂತಾಗಿದೆ….!”

ಹೀಗೆಂದು ರಾಜ್ಯ ವಿಧಾನಸಭೆಯಲ್ಲಿ ಹಾಸ್ಯಚಟಾಕಿ ಹಾರಿಸಿ ಇಡೀ ಸದನವನ್ನೇ ನಗೆಗಡಲಲ್ಲಿ ತೇಲಿಸಿದವರು ಸ್ಪೀಕರ್ ರಮೇಶ ಕುಮಾರ್ !

ಹೌದು, “ಆಪರೇಷನ್ ಕಮಲ ” ಆಡಿಯೋ ಬಹಿರಂಗ ಪ್ರಕರಣವನ್ನು ಯಾವ ರೀತಿಯ ತನಿಖೆಗೆ ಒಳಪಡಿಸಬೇಕು ಎಂಬ ಚರ್ಚೆ ಕಾಲಕ್ಕೆ ಪದೇ ಪದೇ ತಮ್ಮ ಹೆಸರು ಪ್ರಸ್ತಾಪ ಮಾಡುತ್ತಿರುವುದನ್ನು ಕಂಡು ಸಭಾಧ್ಯಕ್ಷರು ಈ ಚಟಾಕಿ ಹಾರಿಸಿದರು.

ರೇಪ್ ಒಂದೇ ಸಲ ಆಗಿಹೋಗಿರುತ್ತದೆ. ಆದರೆ, ವಿಚಾರಣೆ ಸಂದರ್ಭದಲ್ಲಿ ಯಾರು ಮಾಡಿದರು, ಎಲ್ಲಿ ಮಾಡಿದರು? ಹೇಗೆ ಮಾಡಿದರು, ಎಷ್ಟೊತ್ತು ಮಾಡಿದರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಪದೇ ಪದೇ ಕಿರಿ ಕಿರಿ ಉಂಟುಮಾಡಲಾಗುತ್ತದೆ. ಈ ಪ್ರಕರಣದಲ್ಲಿ ನನ್ನ ಸ್ಥಿತಿಯೂ  ಹಾಗೆಯೇ ಆಗಿದೆ ಎಂದು ರಮೇಶ ಕುಮಾರ್ ಹೇಳಿದಾಗ ಸಭೆಯಲ್ಲಿ ನಗೆಯ ಅಲೆ ಎದ್ದಿತು.

Leave a Reply

Your email address will not be published.