ಸಾಮರಸ್ಯ ಬದುಕಿನಿಂದ ಸುಖ ಶಾಂತಿ ಪ್ರಾಪ್ತಿ : ರಂಭಾಪುರಿ ಶ್ರೀ


ಸುರಪುರ:ಸತ್ಯ ಶಾಂತಿಯ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಳ್ಳಬೇಕು. ಮಾನವೀಯ ಸಂಬಂಧಗಳು ಶಿಥಿಲಗೊಂಡು ಎಲ್ಲೆಡೆ ಸಂಘರ್ಷ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಾಮರಸ್ಯ ಬದುಕಿನಿಂದ ಸುಖ ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ತಾಲೂಕಿನ ದೇವಪುರ ಶ್ರೀ ಜಡಿ ಶಾಂತಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ ಕಳಸಾರೋಹಣ ಮತ್ತು ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮನುಷ್ಯ ಜೀವನದಲ್ಲಿ ಕಲಿಕೆ, ಗಳಿಕೆ ಮತ್ತು ಭಗವಂತನ ಚಿಂತನೆಯಲ್ಲಿ ಹೆಜ್ಜೆ ಹಾಕಬೇಕು. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಶಿವಜ್ಞಾನದ ಅರಿವು ಮತ್ತು ಧರ್ಮಾಚಾರ ಬೆಳೆದು ಬರಬೇಕಾಗಿದೆ ಎಂದು ತಿಳಿಸಿದರು.

ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕಾಗಿದೆ. ನೀತಿ ನಿಯಮಗಳು ಇಲ್ಲದಿದ್ದರೆ ಜೀವನ ಉತ್ಕರ್ಷಗೊಳ್ಳಲು ಸಾಧ್ಯವಾಗದು. ಜೀವನ ಮೌಲ್ಯಗಳನ್ನು ಮರೆತರೆ ಬದುಕಿಗೆ ನೆಲೆ ಬೆಲೆ ಬರುವುದಿಲ್ಲ. ಒಂದುಗೂಡಿಸುವ ಕೆಲಸ ಧರ್ಮದಿಂದ ನಡೆಯಲು ಸಾಧ್ಯ ಹೊರತು ಜಾತಿಯಿಂದಲ್ಲ. ಜಾತಿಯ ಸಂಘರ್ಷಗಳು ಅಶಾಂತಿಗೆ ಕಾರಣವಾಗುತ್ತಿವೆ. ವಿವೇಕ, ಧೈರ್ಯ, ಸ್ನೇಹ ಇವುಗಳು ಮಾನವ ವ್ಯಾಧಿಗಳಿಗೆ ದಿವ್ಯೌಷಧ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳನ್ನು ಬೋಧಿಸಿದ್ದಾರೆ. ಶ್ರೀ ಜಡಿ ಶಾಂತಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಮತ್ತು ಕಳಸಾರೋಹಣ ನಿಮಿತ್ಯ ನೂರಾರು ಜೋಡಿ ನವ ದಂಪತಿಗಳು ಗೃಹಸ್ಥ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸತಿ ಪತಿಗಳು ಸಾಮರಸ್ಯದಿಂದ ಬಾಳಿ ಜೀವನದಲ್ಲಿ ಶ್ರೇಯಸ್ಸು ಕಾಣಬೇಕು. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾದರೆ ಹೆಚ್ಚಿನ ಹೊರೆ ಯಾರಿಗೂ ಬರದು ಎಂದರು.

ಮಠಾಧ್ಯಕ್ಷರಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಪ್ರಯತ್ನ ಸಾಧನೆ ಯುವ ಮಠಾಧೀಶರಿಗೆ ಮಾದರಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿ ಶ್ರೀಗಳವರಿಗೆ ರೇಶ್ಮೆ ಮಡಿ ಸ್ಮರಣಿಕೆ ನೀಡಿ ಆಶೀರ್ವದಿಸಿದರು.

ಶಾಸಕ ನರಸಿಂಹ ನಾಯಕ ಮಾತನಾಡಿ ಶರಣರಿಂದ ನಮ್ಮ ಸಂಸ್ಕøತಿ ಉಳಿಯುತ್ತಿದೆ ಯುವಕರು ಅವರ ಮಾರ್ಗದರ್ಶನದಲ್ಲಿ ನಡೆದರೆ ಯಶಸ್ಸು ಸಿಗುತ್ತದೆ ಇತಂಹ ಧರ್ಮಕಾರ್ಯಗಳಲ್ಲಿ ಭಾಗವಹಿಸುವುದರಿಂದ ನಮ್ಮ ಸಂಸ್ಸøತಿಯನ್ನು ಬೇಳೆಸಿದಂತಾಗುತ್ತದೆ ಹಾಗೂ ಶ್ರೀ ಮಠದ ವತಿಯಿಂದ ನಡೆಸಲು ಇಚ್ಚಿಸಿರುವ ಶಾಲೆಗೆ ಹುಣಸಗಿ ಪಟ್ಟಣದಲ್ಲಿ ಸ್ಥಳವನ್ನು ಒದಗಿಸಿಕೂಡುವ ಜವ್ದಾರಿ ನನ್ನದು ಬರಗಾಲದ ಪರಿಸ್ಥಿಯಲ್ಲಿ ಇಚಿತಹ ಸಮಾಜ ಮುಖಿ ಕಾರ್ಯಗಳು ಮಠಗಳಿಂದಾಗುತ್ತಿವೆ ಸಾಮೂಹಿಕ ವಿವಾಹದಿಂದ ಬಡವರಿಗೆ ತುಂಬಾ ಅನೂಕೂಲವಾಗಿದೆ ಎಂದರು

ನಂತರ ಶ್ರೀ ಜಡಿ ಶಾಂತಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ ಶ್ರೀ ಗುರುವಿನ ಅಂತ:ಕರಣದ ಆಶೀರ್ವಾದ ಬಲದಿಂದ ಇಷ್ಟೆಲ್ಲ ಕೆಲಸ ಕಾರ್ಯಗಳು ನಡೆದಿವೆ. ಸಮಾಜದಲ್ಲಿ ಸರ್ವರೂ ಸಾಮರಸ್ಯದಿಂದ ಸುಖದಿಂದ ಬಾಳಬೇಕೆಂಬುದೇ ನಮ್ಮ ಆಶಯವಾಗಿದೆ. ಪವಿತ್ರವಾದ ಗೃಹಸ್ಥಾಶ್ರಮದಲ್ಲಿ ಪಾದಾರ್ಪಣೆ ಮಾಡಿದ ನವ ದಂಪತಿಗಳ ಬಾಳು ಉಜ್ವಲವಾಗಲೆಂದರು

ಇದೇ ಸಂದರ್ಭದಲ್ಲಿ ಶ್ರೀ ಸೋಮೇಶ್ವರ ಧಾಮ ಮತ್ತು ಯಾತ್ರಿ ನಿವಾಸದ ಉದ್ಘಾಟನೆ ನೆರವೇರಿತು. ನೂರಕ್ಕು ಹೆಚ್ಚು ಜೋಡಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.

ಬೆಂಗಳೂರಿನ ಎಸ್.ಪಿ. ದಯಾನಂದ ಪಟ್ಟಣಶೆಟ್ಟಿ ಅವರಿಗೆ “ರೇಣುಕ ಶ್ರೀ” ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಮೈಸೂರು ಜಪದಕಟ್ಟೆ ಮಠದ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಸ್ಟೇಷನ್ ಬಬಲಾದ, ನವಲಕಲ್ಲು, ದೋರನಹಳ್ಳಿ ಚಿಕ್ಕಮಠ ಶ್ರೀಗಳಲ್ಲದೇ ಹಲವಾರು ಮಠಾಧೀಶರು ಪಾಲ್ಗೊಂಡಿದ್ದರು.

ವೀರಶೈವ ಸಮಾಜದ ತಾಲೂಕಾ ಅಧ್ಯಕ್ಷ ಸುರೇಶ ಸಜ್ಜನ ಸ್ವಾಗತಿಸಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಂತಪ್ಪ ನಾಯಕ, ಸಂಗನಗೌಡ ವಜ್ಜಲ, ಮಾತನಾಡಿದರು ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ, ದೊಡ್ಡದೇಸಾಯಿ ದೇವರಗೋನಾಲ, ಜಿಪಂ ಸದಸ್ಯರಾದ ಬಸನಗೌಡ ಯಡಿಯಾಪುರ, ಬಸವರಾಜ ಸ್ಥಾವರವ್ಮಠ, ಹೆಚ್.ಸಿ.ಪಾಟೀಲ, ಸಂಗಣ್ಣ ವೈಲಿ ಇನ್ನಿತರರು ವೇದಿಕೆಯಲ್ಲಿದ್ದರು ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.

Leave a Reply

Your email address will not be published.