ಕಾಲುವೆಗಳಿಗೆ ನೀರು ಹರಿಸಲು ರಾಜಾ ವೆಂಕಟಪ್ಪ ನಾಯಕ ಒತ್ತಾಯ


ಸುರಪುರ: ಬರಗಾಲದಿಂದ ತತ್ತರಿಸಿ ಜನ ಜಾನುವಾರಗಳು ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ ತಕ್ಷಣವೆ ಅಧಿಕಾರಿಗಳು ಎಚ್ಚೆತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ನಾರಾಯಣಪೂರ ಜಲಾಶಯದಿಂದ ತಕ್ಷಣವೇ ಕಾಲುವೆಗಳ ಮುಖಾಂತರ ನದಿ,ಹಳ್ಳಗಳಿಗೆ ನೀರು ಹರಿಸಬೇಕು. ಈ ಬಾರಿ ತಾಲೂಕಿನಲ್ಲಿ ಭೀಕರ ಬರಗಾಲ ಆವರಿಸಿದ್ದು ತಾಲೂಕಿನ ಬಹುತೇಕ ಹಳ್ಳಗಳು ಬತ್ತಿಹೋಗಿರುವದರಿಂದ ಜನರಿಗೆ ಮತ್ತು ಮೂಕ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿರುತ್ತದೆ ಅಲ್ಲದೆ ಗ್ರಾಮೀಣ ಪ್ರದೇಶ ಮತ್ತು ನಗರಪ್ರದೇಶಕ್ಕೆ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು. ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ನಾರಾಯಣಪೂರ ಜಲಾಶಯದಿಂದ ಕಾಲುವೆ ಮುಖಾಂತರ ನೀರು ಹರಿಸುವುದರಿಂದ ಹಳ್ಳಗಳಿಗೆ ಸ್ವಲ್ಪಮಟ್ಟಿನ ನೀರು ಹರಿದು ಜನರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ.

ಜಲಾಶಯದಿಂದ ಕಾಲುವೆಗೆ ನೀರು ಹರಿಸಿ ಜನ ಜಾನುವಾರುಗಳಿಗೆ ನೀರಿನ ಹಾಹಾಕಾರವನ್ನು ತಪ್ಪಿಸಲು ಕ್ರಮಕೈಗೊಳಬೇಕೆಂದು ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಪತ್ರಬರೆದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Leave a Reply

Your email address will not be published.