ದೇಶದ ಅಭಿವೃಧ್ದಿಗೆ ಕಾಂಗ್ರೆಸ್ ಕಂಕಣಬಧ್ದ:ಆರ್.ವಿ.ನಾಯಕ


ಸುರಪುರ: ದೇಶದ ಅಭೀವೃಧ್ಧಿ ಎಂಬುದಕ್ಕೆ ಕಾಂಗ್ರೇಸ್ ಪಕ್ಷವೆ ಮೂಲ ಕಾರಣವಾಗಿದೆ.ಇದೊಂದು ಕೇವಲ ಪಕ್ಷವಾಗಿರದೆ ಜನರ ಆಂದೋಲನವಾಗಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ನಗರದ ವಾರ್ಡ ಸಂಖ್ಯೆ 22 ಮತ್ತು 23 ರಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಅಭಿಯಾನದ ನೇತೃತ್ವ ವಹಿಸಿ ಮಾತನಾಡಿ,ದೇಶದಲ್ಲಿನ ಬಡವರ ದೀನ ದಲಿತರ ಮತ್ತು ಹಿಂದುಳಿದವರ ಅಭಿವೃಧ್ದಿಗೆ ಕಾಂಗ್ರೇಸ್ ಸದಾಕಾಲ ಕಂಕಣ ಬಧ್ಧವಾಗಿದ್ದು,ದೇಶದ ಜನರಿಗೆ ಕಾಂಗ್ರೇಸ್ ಅವಶ್ಯವಾಗಿದೆ ಎಂದರು.

ಕಳೆದ ಬಾರಿಯ ಕೇಂದ್ರದಲ್ಲಿದ್ದ ಮನಮೋಹನ್ ಸಿಂಗವರ ನೇತೃತ್ವದ ಸರಕಾರ ಉದ್ಯೋಗ ಖಾತ್ರಿಯಂತಹ ಯೋಜನೆ ನೀಡುವ ಮೂಲಕ ದೇಶದ ಬಡ ಜನರ ಪಾಲಿಗೆ ವರವಾಗಿದೆ.ಅಲ್ಲದೆ ರಾಜ್ಯದಲ್ಲಿ ಆಡಳಿತ ನಡೆಸಿದ ಸಿದ್ದರಾಮಯ್ಯನವರ ನೇತೃತ್ವದ ಸರಕಾರದಲ್ಲಿ ಜನರಿಗೆ ನೀಡಿದ ಹಲವು ಯೋಜನೆಗಳು ಇತರರಿಗೂ ಮಾದರಿಯಾಗಿವೆ.ಅನ್ನಭಾಗ್ಯ,ಕೃಷಿ ಭಾಗ್ಯ,ಕ್ಷೀರ ಭಾಗ್ಯದಂತಹ ಅನೇಕ ಯೋಜನೆಗಳು ಇಂದಿಗೂ ಜನರಿಗೆ ಉಪಯುಕ್ತವಾಗಿವೆ.ಅಲ್ಲದೆ ನನ್ನ ಅವಧಿಯಲ್ಲಿ ತಾಲ್ಲೂಕಿನ ರೈತರಿಗೆ ವರ್ಷಕ್ಕೆ ಎರಡು ಬೆಳೆಗೆ ನೀರು ಕೊಡಿಸಿದೆ ಹಾಗು ನಗರೋತ್ಥಾನದಲ್ಲಿ ನೂರಾರು ಕೋಟಿ ಅನುದಾನ ತಂದು ನಗರದ ಅಭಿವೃಧ್ಧಿಗೆ ಶ್ರಮಿಸಿರುವೆ.ಅದರಂತ ಈಗ ಮುಂದೆಯೂ ದೇಶಕ್ಕೆ ಕಾಂಗ್ರೇಸ್ ಅನಿವಾರ್ಯವಾಗಿದೆ ಎಂದರು.

ಅಭಿಯಾನದಲ್ಲಿ ವಿಠ್ಠಲ ಯಾದವ,ರಾಜಾ ವಾಸುದೇವ ನಾಯಕ,ರಾಜಾ ರೂಪಕುಮಾರ ನಾಯಕ ಗೋಪಾಲದಾಸ ಲಡ್ಡಾ,ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪೂರ,ರಾಜಾ ವಿಜಯಕುಮಾರ ನಾಯಕ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ,ಅಬ್ದುಲ ಗಫೂರ ನಗನೂರಿ,ನಾಸೀರ ಕುಂಡಾಲೆ, ಜುಮ್ಮಣ್ಣ ಕುಂಬಾರಪೇಟೆ,ರಾಘವೇಂದ್ರ ಗೆದ್ದಲಮರಿ,ದಾವೂದ ಪಠಾಣ,ಮಲ್ಲಣ್ಣ ಹುಬ್ಬಳ್ಳಿ,ಕಮರುಧ್ಧೀನ್,ವೀರೆಶ ದೇಶಮುಖ,ದಾವೂಲ್‍ಸಾಬ ಚಿಟ್ಟಿವಾಲೆ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published.