ವಿಟಿಯು ವಿಭಜನೆ ಬೇಡ ಎಂದು ದೋಸ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಮಾಜಿ ಸಚಿವ ರಾಯರೆಡ್ಡಿ


ಬೆಳಗಾವಿ :ಇಲ್ಲಿನ ವಿಟಿಯು ವಿಶ್ವವಿದ್ಯಾಲಯ ವಿಭಜಿಸುವ ಕ್ರಮವನ್ನು ದೋಸ್ತಿ ಸರ್ಕಾರ ಕೈ ಬಿಡಬೇಕೆಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಒತ್ತಾಯಿಸಿದ್ದಾರೆ.

ಕೊಪ್ಪಳದಲ್ಲಿಯೇ ಸುದ್ಧಿಗೋಷ್ಠಿನಡೆಸದೇ ಬೆಳಗಾವಿಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ  ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ವಿಭಜನೆ ಮಾಡುತ್ತಿರುವ ಸಮ್ಮಿಶ್ರ ಸರ್ಕಾರದ ಕ್ರಮ ಸರಿಯಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಮಾಡುತ್ತಿರುವ ದೊಡ್ಡ ಅನ್ಯಾಯ. ಈ ನಿರ್ಧಾರವನ್ನು ಸರ್ಕಾರ ಹಿಂಪಡೆಯದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ  ನೀಡಿದರು.

ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರೇವಣ್ಣ ವಿಟಿಯು ಕ್ಯಾಂಪಸ್‌ನಲ್ಲಿ ಉಳಿದುಕೊಂಡಿದ್ದರು. ಈಗ ಅದೇ ವಿಟಿಯು ವಿಭಜಿಸಿ ಹಾಸನಕ್ಕೆ ತೆಗೆದುಕೊಂಡು ಹೋಗುವ ಹುನ್ನಾರ ಮಾಡಿದ್ದಾರೆ ಎಂದು ರಾಯರೆಡ್ಡಿ ಆರೋಪಿಸಿದರು.

ಉತ್ತರ ಕರ್ನಾಟಕ ಭಾಗದ ಶಾಸಕರು ಹಾಗೂ ಸಚಿವರಿಗೆ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುವ ಶಕ್ತಿ ಇಲ್ಲದಂತಾಗಿದೆ, ಅದಕ್ಕಾಗಿ ಎಲ್ಲರೂ ಧ್ವನಿ ಎತ್ತಬೇಕು ಎಂದರು.

ಕನ್ನಡಪರ ಸಂಘಟನೆಗಳಿಂದಲೂ ಕೂಡ ವಿಟಿಯು ವಿಭಜನೆ ವಿರೋಧಿಸಿ ನಿನ್ನೆಯಷ್ಟೆ ಪ್ರತಿಭಟನೆಗಳು ಹಮ್ಮಿಕೊಂಡಿದ್ದವು.

Leave a Reply

Your email address will not be published.