ಆಡಿಯೋ ಪ್ರಕರಣ: ಎರಡು ದಿನ ಮೌನವಾಗಿದ್ದ ಬಿಎಸ್ ವೈ ಇಂದು ಸದನದಲ್ಲಿ ಏನು ಹೇಳಿದ್ರು ಗೊತ್ತಾ?!


ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜಕೀಯ ಕುತಂತ್ರದಿಂದ , ಮೋಸ ಮಾಡುವ ಉದ್ದೇಶದಿಂದಲೇ ಆಡಿಯೋ  ರೆಕಾರ್ಡ್ ಮಾಡಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಆಪಾದಿಸಿದ್ದಾರೆ.

“ಆಪರೇಷನ್ ಕಮಲ ” ಆಡಿಯೋ ಬಹಿರಂಗ ಪ್ರಕರಣವನ್ನು ಎಸ್ ಐ ಟಿ ತನಿಖೆಗೆ ಒಪ್ಪಿಸಬೇಕೋ ಬೇಡವೋ ಎಂಬ ಕುರಿತಾಗಿ ನಿನ್ನೆಯಿಂದಲೂ ಸದನದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಸುದೀರ್ಘ ಮೌನ ತಾಳಿದ್ದ ಯಡಿಯೂರಪ್ಪ, ಇಂದು ಮೌನ ಮುರಿದು ಮನಬಿಚ್ಚಿ ಮಾತನಾಡಿದರು.

ನಕಲಿ ದಾಖಲೆ ಸೃಷ್ಟಿಸಿರುವುದು, ಆಡಿಯೋವನ್ನು ಎಡಿಟ್ ಮಾಡಿಸಿದ್ದು ಅಪರಾಧ. ಪ್ರಕರಣವನ್ನು ಎಸ್ ಐ ಟಿ ಗೆ ವಹಿಸುವುದು ಬೇಡ.  ಎಸ್ ಐ ಟಿ  ಮುಖ್ಯಮಂತ್ರಿ ಅಧಿಕಾರ ವ್ಯಾಪ್ತಿಯಡಿ ಬರುತ್ತದೆ. ಹೀಗಾಗಿ ನ್ಯಾಯಾಂಗ ತನಿಖೆಯಾಗಬೇಕು, ಇಲ್ಲವೇ ಸದನ ಸಮಿತಿ ರಚಿಸಬೇಕು ಎಂದು ಅವರು ಆಗ್ರಹಿಸಿದರು.

ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂಬ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದೂ ಅವರು ಸ್ಪಷ್ಟಪಡಿಸಿದರು.

Leave a Reply

Your email address will not be published.