ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ

ಬೆಂಗಳೂರು: ಭಾರತೀಯ ಜನತಾಪಕ್ಷದ ಕೋರ್ ಕಮಿಟಿ ಸಭೆ ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸುವ ಕುರಿತು ಚರ್ಚೆಯಾಗಲಿದೆ. ಚರ್ಚೆಯ ನಂತರ ಪಟ್ಟಿ ಸಿದ್ದಗೊಳಿಸಿ ಕೇಂದ್ರ ಚುನಾವಣಾ ಸಮಿತಿ ಶಿಫಾರಸ್ಸು ಮಾಡಲಾಗುತ್ತದೆ.

ಪ್ರಚಾರ ಕಾರ್ಯಕ್ಕೆ ಕೇಂದ್ರ ನಾಯಕರನ್ನು ಕರೆ ತರುವುದು, ಸ್ಟಾರ್ ಪ್ರಚಾರಕರನ್ನು ನಿಯೋಜಿಸುವ ಕುರಿತಂತೆಯೂ ಚರ್ಚೆಯಾಗಲಿದೆ.

ಮಂಡ್ಯದಲ್ಲಿ ಸುಮಲತಾ ಕಣಕ್ಕಿಳಿದರೆ ಬೆಂಬಲಿಸಬೇಕೋ ಬೇಡವೋ ಎಂಬ ಚರ್ಚೆಯ ಜತೆಗೆ ಹಾಸನ ಮತ್ತು ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತಾಗಿಯೂ ಚರ್ಚೆ ನಡೆಯುವುದು.

Leave a Reply

Your email address will not be published.