ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ತಹಸೀಲ್ದಾರ್ ಮುಖಾಂತರ ಗೃಹ ಸಚಿವರಿಗೆ ಮನವಿ

 


ಮೂಡಲಗಿ : ರಬಕವಿ – ಬನಹಟ್ಟಿ ತಾಲೂಕಿನಲ್ಲಿ ಪತ್ರಕತ೯ನ ಮೇಲೆ ನಡೆದ ಹಲ್ಲೆ ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಗೃಹ ಸಚಿವರಿಗೆ ಮೂಡಲಗಿ ತಹಶೀಲ್ದಾರ ಸ್ಥಳೀಯ ಕಾಯ೯ನಿರತ ಪತ್ರಕತ೯ರ ಬಳಗವು ಇಂದು ಬೆಳಿಗ್ಗೆ ಮನವಿ ಸಲ್ಲಿಸಿದರು.
ಸಂವಿಧಾನದ 4 ನೇ ಅಂಗವಾಗಿ ಸಮಾಜದ ಒಳಿತಿಗಾಗಿ ಕಾಯ೯ನಿವ೯ಹಿಸಿತ್ತಿರುವ ಪತ್ರಿಕಾರಂಗದ ಪ್ರತಿನಿಧಿಗಳಿಗೆ ಮೇಲಿಂದ ಮೇಲೆ ಹಲ್ಲೆ ನಡೆಯುತ್ತಿದ್ದು ಇದರಿಂದ ಪತ್ರಕತ೯ರಿಗೆ ಭದ್ರತೆ ಇಲ್ಲದಾಗಿದೆ ಕಾರಣ ಅಪರಾದಿಗಳಿಗೆ ತಕ್ಕ ಶಿಕ್ಷೆ ವಿಧಿಸಿಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರಹೋರಾಟಕ್ಕೆ ಇಳಿಯುವದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ.

ಅಧಿಕಾರಿಗಳ ನಿಲ೯ಕ್ಷ ತಹಸೀಲ್ದಾರ, ಉಪತಹಶಿಲ್ದಾರ ಶಿರಸ್ಥೆದಾರ ಯಾರು ಇಲ್ಲದರಿಂದ ಪ್ರಥಮ ದರ್ಜೆ ಸಹಾಯಕ ಉದಪ್ಪನ್ನವರ ಅವರು ಮನವಿ ಸ್ವಿಕರಿಸುವಂತಾಯಿತು.

ಈ ಸಂದರ್ಭದಲ್ಲಿ ಪತ್ರಕತ೯ರಾದ ವಾಯ್ ವಾಯ್ ಸುಲ್ತಾನಪೂರ, ಕೆ ಬಿ ಗಿರೆನ್ನವರ, ಸುದಾಕರ ಉಂದ್ರಿ, ಸುಭಾಸ ಗೊಡ್ಯಾಗೋಳ, ಶಿವಾನಂದ ಹಿರೇಮಠ, ಸುದೀರ ನಾಯರ, ಶಿವಬಸು ಗಾಡವಿ, ಅಲ್ತಾಫ ಹವಾಲ್ದಾರ , ಮಲ್ಲು ಬೋಳನ್ನವರ ಇನ್ನಿತರರು ಉಪಸ್ಥಿತರಿದ್ದರು. Ishwar dhavaleshwar.

Leave a Reply

Your email address will not be published.