ಬೆಳಗಾವಿ: ಕೊಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ 30. ಕೆ.ಜಿ. ಬೆಳ್ಳಿ ವಶ


ಬೆಳಗಾವಿ: ಸಮೀಪದ ಕೊಲ್ಹಾಪೂರದಿಂದ ಅನಧಿಕೃತವಾಗಿ ಬೆಳ್ಳಿ ಆಭರಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಸುಮಾರು 11.82 ಲಕ್ಷ ಬೆಲೆಬಾಳುವ 30 ಕೆಜಿ ಬೆಳ್ಳಿಯನ್ನು ಮಹಾರಾಷ್ಟ್ರ ಮೂಲದ ರಾಜೇಂದ್ರಕುಮಾರನಿಂದ ಕೊಗನೊಳ್ಳಿ ಚೆಕ್ ಪೋಸ್ಟ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಕಾರಿನಲ್ಲಿ ಕೊಲ್ಲಾಪುರದಿಂದ ರಾಣೆಬೆನ್ನೂರಿಗೆ ಸಿಲ್ವರ್ ಸಾಗಿಸಲಾಗುತ್ತಿತ್ತು.‌ ಪರಿಶೀಲನೆ ವೇಳೆ ಬೆಳ್ಳಿ‌‌ ಸಾಗಣೆ ಸಂಬಂಧ ಯಾವುದೇ ದಾಖಲೆ ಸಿಕ್ಕಿಲ್ಲ. ಮುಂದಿನ ಕ್ರಮಕ್ಕಾಗಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Leave a Reply

Your email address will not be published.