ದೇವೇಗೌಡರ ಕುಟುಂಬಕ್ಕೆ ಈ ಚುನಾವಣೆಯಲ್ಲಿ ” 9″ ಕಂಟಕವಾಗಲಿದೆಯಂತೆ !!

ಹಾಸನ: ಮಾಜಿ ಪ್ರಧಾನಿ ಎಚ್ . ಡಿ. ದೇವೇಗೌಡರ ಕುಟುಂಬಕ್ಕೆ 9 ಎಂಬ ಸಂಖ್ಯೆ ಕಂಟಕಪ್ರಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾವಣೆಯಲ್ಲಿ ಅವರ ಕುಟುಂಬ ಸದಸ್ಯರಿಗೆ ಸೋಲು ನಿಶ್ಚಿತ ಎಂದು ಮಾಜಿ ಸಚಿವ ಎ. ಮಂಜು ಭವಿಷ್ಯ ನುಡಿದಿದ್ದಾರೆ !

ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಮಂಜು, 1989 ಮತ್ತು 1999 ರ ಚುನಾವಣೆಗಳಲ್ಲಿ ದೇವೇಗೌಡ ಸೋಲನುಭವಿಸಿದ್ದರು. ಅದೇ ಪ್ರಕಾರ ಈಗ 2019 ರಲ್ಲಿಯೂ ಅವರಿಗೆ ಸೋಲುಂಟಾಗಲಿದೆ ಎಂದು ಹೇಳಿದರು.

ವರ್ಷದ ಕೊನೆಯಲ್ಲಿ ಬರುವ ” 9 ” ಸಂಖ್ಯೆ ದೇವೇಗೌಡ ಕುಟುಂಬಕ್ಕೆ ಕಂಟಕವಾಗಲಿದೆ ಎಂಬುದು ಅವರ ವಾದ.

ದೇವೇಗೌಡ ಕುಟುಂಬದ ವಿರುದ್ಧ ಕಳೆದ ಕೆಲವು ದಿನಗಳಿಂದ ತೊಡೆ ತಟ್ಟಿರುವ ಮಂಜು, ಹಾಸನ ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧಿಸುವುದಾದರೆ ಮಾತ್ರ ತಾವು ಬೆಂಬಲ ನೀಡುವುದಾಗಿ ಹೇಳಿದ್ದರಲ್ಲದೇ ಪ್ರಜ್ವಲ ರೇವಣ್ಣ ಕಣಕ್ಕಿಳಿದರೆ ಬೆಂಬಲ ಇರುವುದಿಲ್ಲ ಎಂದು ಹೇಳಿದ್ದರು.

ಇದೀಗ ಪ್ರಜ್ವಲ ರೇವಣ್ಣ ಹಾಸನದಲ್ಲಿ ಕಣಕ್ಕಿಳಿಯುವುದು ನಿಶ್ಚಿತವಾಗಿದ್ದು, ಅವರ ವಿರುದ್ಧ ಬಿಜೆಪಿ ವತಿಯಿಂದ ಸ್ಪರ್ಧೆ ಮಾಡಲು ಮಂಜು ಚಿಂತನೆ ನಡೆಸಿದ್ದಾರೆ.

Leave a Reply

Your email address will not be published.