ಖಾಸಗಿ ಬಸ್, ಬೈಕ್ ಮಧ್ಯೆ ಅಪಘಾತ: ಒಬ್ಬ ಸಾವು!

ಮಧುಗಿರಿ: ಖಾಸಗಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಪಟ್ಟಣ ಕೆಶಿಫ್ ರಸ್ತೆಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಐಡಿಹಳ್ಳಿ ಹೋಬಳಿಯ ದಿನ್ನೇಗೊಲ್ಲರಹಟ್ಟಿಯ ವಾಸಿ ಶಿವಣ್ಣ(38) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಗಂಭೀರ ಗಾಯಗೊಂಡಿದ್ದು, ಆತನ ವಿವರ ತಿಳಿದು ಬಂದಿಲ್ಲ.

ಈ ಸಂಬಂಧ ಮಧುಗಿರಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published.