ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಚಿಕಿತ್ಸೆ ಫಲಿಸದೆ ಸಾವು: ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ


ಅಥಣಿ: ಬೈಕ್ ಅಪಘಾತದಲ್ಲಿ  ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ  ಯೋಧನ ಅಂತ್ಯಕ್ರಿಯೆ ನಿನ್ನೆ ಸಂಜೆ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು.

ಗುಂಡೇವಾಡಿ ಗ್ರಾಮದ ಬಿಎಸ್ ಎಫ್ ಯೋಧ ಗಜಾನನ ಕಾಂಬಳೆ(30) ಮೃತ ಯೋಧ. ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ. ಪತ್ನಿಯನ್ನು ಭೇಟಿ ಮಾಡಲು ಬೈಕ್ ಮೇಲೆ ತೆರಳುತ್ತಿದ್ದಾಗ ಚಮಕೇರಿ ಕ್ರಾಸ್ ಬಳಿ  ಎರಡು ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡಿದ್ದ ಯೋಧನನ್ನು ಮಹಾರಾಷ್ಟ್ರದ ಸಾಂಗಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಿಸದೆ ಯೋಧ ಗಜಾನನ ಸಾವನ್ನಪ್ಪಿದ್ದ.

ನಿನ್ನೆ ಸಂಜೆ ಸ್ವಗ್ರಾಮ ಗುಂಡೇವಾಡಿಯಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಯಿತು.

2012 ರಲ್ಲಿ  ಗಜಾನನ ಬಿಎಸ್ ಎಫ್ ಗೆ ಸೇರಿದ್ದರು. ದೇಶದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ.  ಅಪಘಾತ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.