ಬಿಜೆಪಿಗೆ ಸೇರಿದ ಮಾಜಿ ಶಾಸಕ ಜಗದೀಶ ಮೆಟಗುಡ್ಡ : ಅಭಿಮಾನಿಗಳ ಸಂಭ್ರಮ

ಬೈಲಹೊಂಗಲ- ಮಾಜಿ ಶಾಸಕ ಜಗಧೀಶ ಮೆಟಗುಡ್ಡ ಅವರು ಮರಳಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕೆ ಅವರ ಅಭಿಮಾನಿ ಬಳಗ ಪಟ್ಟಣದ ಅವರ ನಿವಾಸ ಎದುರು ಸೋಮವಾರ ಪಟಾಕ್ಷೀ ಸಿಡಿಸಿ, ಸಿಹಿ ಹಂಚಿ ಸಂಬ್ರಮಿಸಿದರು.

ಯುವ ಮುಖಂಡರಾದ ಪ್ರಪೂಲ ಪಾಟೀಲ, ಶಿವಾನಂದ ಬಡ್ಡಿಮನಿ ಮಾತನಾಡಿ, ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಕರೆಯ ಮೇರೆಗೆ ಜಗದೀಶ ಮೆಟಗುಡ್ಡ ಅವರು ಬೆಂಗಳೂರಿನ ಯಡಿಯೂರಪ್ಪ ಅವರ ನಿವಾಸದಲ್ಲಿ ಹಲವಾರು ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಹರ್ಷದಾಯಕವಾಗಿದೆ ಎಂದರು.

ಬೈಲಹೊಂಗಲ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಮತ್ತೆ ಆನೆ ಬಲ ಬಂದಂತಾಗಿದ್ದು, ಕ್ಷೇತ್ರದಲ್ಲಿ ಮತ್ತೆ ಬಿಜೆಪಿಯನ್ನು ಇನ್ನೂ ಹೆಚ್ಚಿಗೆ ಬಲಪಡಿಸಿ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಪಕ್ಷಕ್ಕೆ ಲಭಿಸಲಿವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸಾಗರ ಬಾಂವಿಮನಿ, ಅನೀಲ ಮೆಟಗುಡ್ಡ, ಸುಭಾಷ ತುರಮರಿ, ಶಿವಯೋಗಿ ಹುಲ್ಲೇನ್ನವರ, ಅಶೋಕ ಗುಂಡ್ಲೂರ, ದಯಾನಂದ ಪರಾಳಶೆಟ್ಟರ, ಮಹಾಂತೇಶ ಜಿಗಜಿನ್ನಿ, ಸಂತೋಷ ಹಡಪದ, ಬಸವರಾಜ ಅಂಗಡಿ, ಮಾರುತಿ ತುರಮರಿ, ಶಂಭೂ ಹೂಲಿ, ಸುರೇಶ ವಾಲಿ, ಚಂದ್ರಶೇಖರ ಸವದತ್ತಿ, ಸಂಜು ಕುಪ್ಪಸಗೌಡರ, ಶಿವಶಂಕರ ನಾಗನೂರ ಮುಂತಾದವರು ಇದ್ದರು.

Leave a Reply

Your email address will not be published.