ನಿಮ್ಮ ಋಣ ತೀರಿಸಲು ನಿಖಿಲ್ ಚುನಾವಣೆ ಕಣಕ್ಕಿಳಿಸುತ್ತಿದ್ದೇನೆ: ಸಿಎಂ ಕುಮಾರಸ್ವಾಮಿ


ಮಂಡ್ಯ:  ನಿಮ್ಮ ಋಣ ತೀರಿಸಲು  ನಿಖಿಲ್ ನನ್ನು ಚುನಾಚವಣೆಗೆ ನಿಲ್ಲಿಸುತ್ತಿದ್ದೇನೆ, ಗೆಲ್ಲಿಸುವುದು ಬಿಡುವುದು ನಿಮಗೆ ಬಿಟ್ಟದ್ದು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮದ್ದೂರಿನಲ್ಲಿ ನಡೆದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯದವರು ನನ್ನನ್ನು ಹೆಮ್ಮರವಾಗಿ ಬೆಳೆಸಿದ್ದಾರೆ, ಅಂತೆಯೇ ರಾಮನಗರ ಜನತೆ ಒಪ್ಪಿಕೊಂಡು ಬೆಳೆಸಿದ್ದರು.  ಮಂಡ್ಯ ಜಿಲ್ಲೆಯ ಋಣ ನನ್ನ ಹೃದಯದಲ್ಲಿದೆ. ಮಗನಿಗಾಗಿ ನಾನು ಆಸ್ತಿ ಮಾಡಲು ಹೊರಟವನಲ್ಲ. ನೀವೇ ನನ್ನ ನಿಜವಾದ ಆಸ್ತಿ. ಸಂಪೂರ್ಣ ಬದುಕನ್ನು ಜನರಿಗಾಗಿ ಮೀಸಲಿಡುತ್ತೇನೆ ಎಂದರು.

ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ಕುಟುಂಬದ ವಿರುದ್ದ ಅಪಪ್ರಚಾರ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗ್ತಿದೆ.  ಕಳೆದ ವಿಧಾನ ಸಭೆ ಚುನಾವಣೆಯಲ್ಲಿಯೇ ಕಾರ್ಯಕರ್ತರು, ನಾಯಕರು ನಿಖಿಲ್ ಹೆಸರು ಪ್ರಸ್ತಾಪಿಸಿದ್ದರು, ಆದರೆ ನಾನು ವಿರೋಧ ವ್ಯಕ್ತಪಡಿಸಿದ್ದೆ.  ಮಗನನ್ನು ಚುನಾವಣೆಗೆ ನಿಲ್ಲಿಸಲು ಇಚ್ಚಿಸಿರಲಿಲ್ಲ ಎಂದರು.

Leave a Reply

Your email address will not be published.