ಬೆಳಗಾವಿ ಕ್ಷೇತ್ರಕ್ಕೆ ಶಿವಕಾಂತ ಸಿದ್ನಾಳ್, ಅಶೋಕ ಪಟ್ಟಣ ಹೆಸರು ಅಂತಿಮ?


“8 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸ್ಕ್ರೀನಿಂಗ್ ಕಮಿಟಿಗೆ  ರವಾನೆ”

ಬೆಂಗಳೂರು: ಬೆಳಗಾವಿ ಸೇರಿ 8 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಸಿದ್ದಪಡಿಸಿದ್ದು ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ. 

ಇಂದು ನಡೆದ ಆಯಾ ಲೋಕಸಭೆ ಕ್ಷೇತ್ರಗಳ ನಾಯಕರ ಜೊತೆ ಸಭೆ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಲಾಗಿದೆ.

ಬೆಳಗಾವಿ – ಶಿವಕಾಂತ್ ಸಿದ್ನಾಳ್ ಮತ್ತು ಅಶೋಕ ಪಟ್ಟಣ ಹೆಸರುಗಳನ್ನು ಅಂತಿಮಗೊಳಿಸಲಾಗಿದ್ದು ಸ್ಕ್ರಿನಿಂಗ್ ಕಮಿಟಿಗೆ ಕಳುಹಿಸಲಾಗಿದೆ. 

ಬಾಗಲಕೋಟೆ: ವೀನಾ ಕಾಶಪ್ಪನವರ, ಎಸ್ ಆರ್. ಪಾಟೀಲ, 

ಮಂಗಳೂರು: ರಮಾನಾಥ್ ರೈ, ಮೋಯಿದ್ದಿನ್ ಬಾವಾ

ಧಾರವಾಡ: ವಿನಯ ಕುಲಕರ್ಣಿ, ಶಾಕಿರ ಸನದಿ,

ಕೊಪ್ಪಳ: ರಾಜಶೇಖರ ಹಿಟ್ನಾಳ

ಮೈಸೂರು: ಸಿ.ಎಚ್. ರವಿಶಂಕರ

ಬೆಂಗಳೂರು ಕೇಂದ್ರ್: ರೋಷನ್ ಬೇಗ್, ರಿಜವಾನ ಸನದಿ ಹೆಸರುಗಳನ್ನು ಕಾಂಗ್ರೆಸ್ ಸ್ಕ್ರೀನಿಂಗ ಕಮಿಟಿಗೆ ಕಳುಹಿಸಲಾಗಿದೆ. 

Leave a Reply

Your email address will not be published.