ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಮಾಡ್ತೀವಿ ಅಂದ್ರು ನೋಡ್ರಿ !

ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಈ ಬಾರಿ ಬಡ ಮತದಾರರ ಓಲೈಕೆಗೆ ಮುಂದಾಗಿದೆ. ಚುನಾವಣಾ ಪ್ರಣಾಳಿಕೆ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿಯಿರುವಂತೆ ರಾಷ್ಟ್ರದಾದ್ಯಂತ ಇರುವ ಶೇ.20 ಕಡುಬಡವರಿಗೆ ವಾರ್ಷಿಕವಾಗಿ 72 ಸಾವಿರ ರೂ. ಕನಿಷ್ಠ ಆದಾಯದ ರೂಪದಲ್ಲಿ ನಗದನ್ನು ಕೊಡುವುದಾಗಿ ಭರವಸೆ ನೀಡಿದೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್​ ಗಾಂಧಿ ಈ ಘೋಷಣೆ ಮಾಡಿದರು. ಈ ಯೋಜನೆಗೆ ‘ನ್ಯಾಯ್​’ ಎಂದು ನಾಮಕರಣ ಮಾಡಲಾಗಿದೆ.

21ನೇ ಶತಮಾನದಲ್ಲೂ ದೇಶದಲ್ಲಿ ಬಡತನ ತಾಂಡವಾಡುತ್ತಿದೆ ಎಂದರೆ ತುಂಬಾ ನೋವಾಗುತ್ತದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎರಡು ಭಾರತಗಳು ನಿರ್ಮಾಣವಾಗಿವೆ. ಒಂದು ಭಾರತ ಅನಿಲ್​ ಅಂಬಾನಿ ಅವರಂಥವರದ್ದಾಗಿದ್ದರೆ, ಇನ್ನೊಂದು ಭಾರತ ಕಡುಬಡವರದ್ದಾಗಿದೆ. ಈ ವಿಭಜನೆಯನ್ನು ನಿವಾರಿಸಲು ಮಾಸಿಕವಾಗಿ 12 ಸಾವಿರ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಬಡವರಿಗೆ ವಾರ್ಷಿಕವಾಗಿ ಕನಿಷ್ಠ ಆದಾಯವನ್ನು ಒದಗಿಸಲು ನಿರ್ಧರಿಸಲಾಗಿದೆ. ಇದರ ಪ್ರಕಾರ ವಾರ್ಷಿಕವಾಗಿ 72 ಸಾವಿರ ರೂ. ನಗದನ್ನು ಶೇ.20 ಬಡವರ ಬ್ಯಾಂಕ್​ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ವಿವರಿಸಿದರು.

ಯಾವುದೇ ಧರ್ಮ, ಜಾತಿ, ಮತ ಎಂಬ ಬೇಧಭಾವವಿಲ್ಲದೆ ಎಲ್ಲ ಬಡವರಿಗೂ ಈ ಯೋಜನೆಯ ಲಾಭ ಸಿಗುವಂತೆ ಮಾಡಲಾಗುವುದು. ಈ ಯೋಜನೆಯಿಂದ ದೇಶದಾದ್ಯಂತ ಇರುವ 5 ಕೋಟಿ ಕುಟುಂಬಗಳ 25 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದರು

One Response to "ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಮಾಡ್ತೀವಿ ಅಂದ್ರು ನೋಡ್ರಿ !"

  1. ಚಿನ್ನಸ್ವಾಮಿ   March 25, 2019 at 9:13 pm

    ಅವರಪ್ಪನಾಣೆಗೂ ಅಸಾಧ್ಯ

    Reply

Leave a Reply

Your email address will not be published.