ಕಣ್ಣೀರು ಹೊಳೆ ಹರಿಸಿ, ಪ್ರಜ್ವಲ್ ಹಾಸನ ಅಭ್ಯರ್ಥಿ ಎಂದು ಘೋಷಿಸಿದ ದೇವೇಗೌಡ!!


ಹಾಸನ: ಪ್ರಜ್ವಲ್ ರೇವಣ್ಣ  ಹಾಸನ ಲೋಕಸಭಾ ಕ್ಷೇತ್ರ ಅಧಿಕೃತ ಅಭ್ಯರ್ಥಿ  ಎಂದು ಕಣ್ಣೀರು ಸುರಿಸಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ  ಅವರು  ಹೊಳೆನರಸೀಪುರದಲ್ಲಿ  ನಿನ್ನೆ ಘೋಷಿಸಿದರು.

ಕಣ್ಣೀರು ಸುರಿಸುತ್ತಾ ಭಾವನಾತ್ಮಕವಾಗಿ ಮಾತನಾಡಿದ ದೇವೇಗೌಡರು, ಕೊಟ್ಟ ಮಾತಿನಂತೆ ನನ್ನ ಮೊಮ್ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದೇನೆ. ನಿಮ್ಮ ಅನುಮತಿ ಪಡೆದೆ ಪ್ರಜ್ವಲ್ ಅಭ್ಯರ್ಥಿ ಎಂದು ಘೋಷಿಸಿದ್ದೇನೆ. ನಿಮ್ಮ ಮಡಿಲಿಗೆ ಪ್ರಜ್ವಲ್ ನನ್ನು ಹಾಕಿದ್ದು, ಆತನ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ದೇವೇಗೌಡರು ಕಣ್ಣೀರ ಕೋಡಿ ಹರಿಸಿದರು.

ದೇವೇಗೌಡರು ಕಣ್ಣೀರು ಸುರಿಸುವುದನ್ನು ನೋಡಿ, ಅವರ ಪುತ್ರ ರೇವಣ್ಣ ಕಣ್ಣು ಒರೆಸಿಕೊಂಡರೆ  ಮೊಮ್ಮಗ ಪ್ರಜ್ಚಲ್ ಕಣ್ಣಾಲಿಗಳು ತುಂಬಿ ಬಂದಿದ್ದವು.

ಯಾವ ಸುದ್ದಿ ಮಾಧ್ಯಮ ನೋಡಿದರೂ ನಮ್ಮ ಕುಟುಂಬದ ವಿರುದ್ಧವೇ ಸುದ್ದಿ ಬರುತ್ತಿದೆ. ನಾನು ಕೇವಲ ನನ್ನ ಮಕ್ಕಳಿಗಾಗಿ ಹೋರಾಟ ಮಾಡುತ್ತೇನೆ ಎಂದು ಆರೋಪಿಸುತ್ತಾರೆ. ಆದರೆ, ನಾನು ಯಾರಿಗೆ ಮೋಸ ಮಾಡಿದ್ದೇನೆ ಹೇಳಿ ಎಂದು ನೆರೆದಿದ್ದವರನ್ನು ಪ್ರಶ್ನಿಸಿ ಕಣ್ಣೊರೆಸಿಕೊಂಡರು.

ಹೊಳೆನರಸೀಪುರ ತಾಲೂಕು ಮೂಡಲಹಿಪ್ಪೆ ಚನ್ನಕೇಶವ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ  ತೆರೆದ ವಾಹನದಲ್ಲಿ  ಮಾಜಿ ಪ್ರಧಾನಿ ದೇವೇಗೌಡ, ಅಭ್ಯರ್ಥಿ ಪ್ರಜ್ವಲ್, ರೇವಣ್ಣ ದಂಪತಿ ಪ್ರಚಾರ ನಡೆಸಿದರು.

Leave a Reply

Your email address will not be published.