ರಾಜ್ಯದಲ್ಲಿ 17 ಎಂಪಿ ಸ್ಥಾನವಿರುವ ಬಿಜೆಪಿಯನ್ನು 4-5ಕ್ಕಿಳಿಸುತ್ತೇನೆ: ದೇವೇಗೌಡ ಶಪಥ


ಮಂಡ್ಯ:  ಜಿಲ್ಲೆಯ ಮದ್ದೂರಿನಲ್ಲಿ ಇಂದು ನಡೆದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ  ಮಾಜಿ ಪ್ರಧಾನಿ ದೇವೇಗೌಡ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ  ನಿಖಲ್ ಕುಮಾರಸ್ವಾಮಿ  ಎಂದು ಘೋಷಿಸಿದರು.

ಮುಂದುವರೆದು ಮಾತನಾಡಿದ ಅವರು, ರಾಜ್ಯದಲ್ಲಿ 17 ಸ್ಥಾನಕ್ಕಿರುವ ಬಿಜೆಪಿಯನ್ನು 4 ರಿಂದ 5 ಸ್ಥಾನಕ್ಕೆ ಇಳಿಸುತ್ತೇನೆ ಎಂದು ಶಪಥ ಮಾಡಿದರು. ನಿಮ್ಮ ಆಶೀರ್ವಾದದಿಂದ ನಿಖಿಲ್ ಗೆಲ್ಲುತ್ತಾನೆ, ಗೋಬ್ಯಾಕ್ ಬ್ಯಾಕ್ ನಿಖಿಲ್ ಅಂದಿದ್ದು, ನೋವಾಗಿದೆ. ನಿಮ್ಮ ಪ್ರೀತಿಯನ್ನು ನಾನು ದುರ್ಬಳಕೆ ಮಾಡಲ್ಲ. ನನ್ನ ಕಣ್ಣೀರನ್ನು ವ್ಯಂಗ್ಯ ಮಾಡಬೇಡಿ ನಿನ್ನೆಯಂತೆ ಇಂದು ನಾನು ಕಣ್ಣೀರು ಸುರಿಸಲ್ಲ ಎಂದರು.

ಮೋದಿ ಕಾಂಗ್ರೆಸ್​ ಮುಕ್ತ ಭಾರತ ಮಾಡ್ತೀನಿ ಅಂದಿದ್ದರು. 3 ರಾಜ್ಯಗಳ ಚುನಾವಣೆಯಲ್ಲೂ ಬಿಜೆಪಿ ಸೋತಿದೆ. 13 ಉಪಚುನಾವಣೆಯಲ್ಲಿ ಬಿಜೆಪಿ ಸತತ ಸೋಲು ಕಂಡಿದೆ.  ಆ ನಂತರ 13 ಉಪಚುನಾವಣೆಗಳಾದವು, ಎಂದರು.

ದೆಹಲಿ ಮುಖಂಡರ ಆಗ್ರಹದ ಮೇರೆಗೆ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಮಲ್ಲಿಕಾರ್ಜುನ್​ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ನಾನು ಸೋನಿಯಾ, ರಾಹುಲ್ ಗಾಂಧಿ ಅವರಿಗೆ ಹೇಳಿದ್ದೆ. ಆದರೆ ಅವರು ಒಪ್ಪಲಿಲ್ಲ, ಬಿಜೆಪಿ ದೂರವಿಡಲು ಒಟ್ಟಾಗೋಣ ಎಂದು ಹೇಳಿದರು. ನಂಬಿಕೆಯಿಂದಲೇ 60 ವರ್ಷ ರಾಜಕಾರಣ ಮಾಡಿದ್ದೇನೆ, ಎಂದು ದೇವೇಗೌಡರು ಹೇಳಿದರು.

 

Leave a Reply

Your email address will not be published.