ಲೋಕಸಮರ: ಬೆಳಗಾವಿ, ಚಿಕ್ಕೋಡಿ ಸೇರಿ ಉ. ಕರ್ನಾಟಕದಲ್ಲಿ ಏ. 23ರಂದು ಮತದಾನ

 


ಹೊಸದಿಲ್ಲಿ: ಲೋಕಸಮರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಇದೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡಯಲಿದೆ. 

ಏಪ್ರಿಲ್ 23 ರಂದು ಬೆಳಗಾವಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳು ಸೇರಿದಂತೆ ಉತ್ತರ ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಬಾಗಲಕೋಟೆ, ವಿಜಯಪುರ, ಬಳ್ಳಾರಿ, ರಾಯಚೂರು, ಕಲಬುರಗಿ, ಹಾವೇರಿ, ಬೀದರ, ಧಾರವಾಡ, ಕೊಪ್ಪಳ, ಉ.ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಲ್ಲಿಯೂ ಏ. 23 ರಂದು ಮತದಾನ ನಡೆಯಲಿದೆ.

ಏಪ್ರಿಲ್ 18 ರಂದು ನಡೆಯುವ ಪ್ರಥಮ ಹಂತದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಮತದಾನ ನಡೆಯಲಿದೆ.

ಮೇ. 23 ರಂದು ಫಲಿತಾಂಶ ಹೊರಬರಲಿದೆ.

Leave a Reply

Your email address will not be published.