ಮಾತೆ ಮಹಾದೇವಿ ನಿಧನಕ್ಕೆ ಕಂಬನಿ ಮಿಡಿದ ಗಜೇಂದ್ರಗಡ ಲಿಂಗಾಯತ ಮಹಾಸಭಾ


ಗಜೇಂದ್ರಗಡ: ಲಿಂಗಾಯತ ಧರ್ಮದ ಮಹೋನ್ನತ ಚೇತನ ಮಾತೆ ಮಹಾದೇವಿ ಅವರ ಅಗಲಿಕೆ ಹಿನ್ನಲೆಯಲ್ಲಿ ಸ್ಥಳೀಯ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಕಾಲಕಾಲೇಶ್ವರ ವೃತ್ತದಲ್ಲಿ  ಶೃದ್ದಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಜಾಗತಿಕ ಲಿಂಗಾಯತ ಮಹಾಸಭಾದ ಡಾ. ಬಿ.ವಿ ಕಂಬಳ್ಯಾಳ ಮಾತನಾಡಿ, ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದ ಮಾತೆ ಮಹಾದೇವಿ ಗುರು ಲಿಂಗಾ ನಂದರವರಿಂದ ಪ್ರಭಾವಿತರಾಗಿ ಸನ್ಯಾಸ ಸ್ವೀಕರಿಸಿದ್ದರು. 1980 ಬಸವ ಧರ್ಮ ಪ್ರಚಾರಕ್ಕೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. 1978 ಬೆಂಗಳೂರಿನ ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ ನಿರ್ಮಾಣ ಮತ್ತು 1975ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ಮಾಡಿದ್ದರು. ಅವರ ಹೆಪ್ಪಿಟ್ಟ ಹಾಲು ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರ ಸಹ ದೊರೆತಿದೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹಗಲಿರುವುದು ಶ್ರಮಿಸಿದ ಮಹಾನ್ ಮಾತೆಯಾಗಿದ್ದಾರೆ ಎಂದರು.

ಬಿ.ಎಸ್ ಶೀಲವಂತರ, ಬಸವರಾಜ ಹೂಗಾರ, ಮಂಜುನಾಥ್ ಹೂಗಾರ, ಸಾಗರ ವಾಲಿ, ಕೆ.ಎಸ್ ಸಾಲಿಮಠ, ಕುಮಾರ ಸಂಗಮದ, ಸಿದ್ದು ಗೊಂಗಡಶೆಟಿಮಠ, ಯು.ಆರ್ ಚೆನ್ನಮ್ಮನವರ, ಸುರೇಶ ಚೋಳಿನ, ಸಂತೋಷ ಸಂಕನೂರ, ಬಿ.ಎಸ್ ಬಸನಗೌಡರ, ರವಿ ಗಡೇದವರ, ಮಂಜುನಾಥ ಹರಿಹರ, ಮಂಜುನಾಥ ರೊಟ್ಟಿ, ಬಾಳು ಜಂತ್ಲಿ, ನಾರಾಯಣ ಬಾಕಳೆ, ಅಶೋಕ ಕಲ್ಲಿಗನೂರ, ಬಸವರಾಜ ಹಾದಿಮನಿ ಉಪಸ್ಥಿತರಿದ್ದರು.

Leave a Reply

Your email address will not be published.