ಗೋಕಾಕ: ಠೇವಣಿ ಹಣ ಗುಳುಂ ಮಾಡಿದ ಸೊಸೈಟಿ ಕಾರ್ಯದರ್ಶಿ ಬಂಧನ


ಬೆಳಗಾವಿ: ಠೇವಣಿದಾರರ ಹಣವನ್ನು ಗುಳುಂ ಮಾಡಿದ ಇಲ್ಲಿನ ಜಗದ್ಗುರು ರೇಣುಕಾಚಾರ್ಯ ಸೊಸೈಟಿ ಕಾರ್ಯದರ್ಶಿಯನ್ನು  ಪೊಲೀಸರು ‌ಬಂಧಿಸಿದ್ದಾರೆ.

ಸೊಸೈಟಿ ವಿರುದ್ಧ ಗ್ರಾಹಕರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.  ಠೇವಣಿ ಹಣ ಸಿಗದೇ ಈವರೆಗೆ  ಗ್ರಾಹಕರು ಚಿಕಿತ್ಸೆಗೂ ಹಣವಿಲ್ಲದೇ ಮೃತಪಟ್ಟಿದ್ದಾರೆ.

ಗಂಭೀರ ಸ್ವರೂಪ ಪಡೆದ ಈ ಪ್ರಕರಣವನ್ನು ಇಲ್ಲಿನ ಸಹಕಾರಿ‌ ಸಂಘಗಳ ನಿರೀಕ್ಷಕ ಎಸ್ ಬಿ. ಬಿರಾದಾರ  ಗೋಕಾಕ್​ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು.‌

ದೂರಿನ‌ ಅನ್ವಯ ಚನ್ನಬಸಯ್ಯ ಯೋಗಿಕೊಳ್ಳಮಠನನ್ನು‌ ಸೊಸೈಟಿಯಲ್ಲಿನ ಗ್ರಾಹಕರು ಠೇವಣಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.

ಈ‌ ಸೊಸೈಟಿಯಲ್ಲಿ ಸಾವಿರಾರು ಗ್ರಾಹಕರು‌ ಕೋಟ್ಯಂತರ ರೂ. ಠೇವಣಿ ಇಟ್ಟಿದ್ದಾರೆ.

Leave a Reply

Your email address will not be published.