ಖರ್ಗೆಯನ್ನು ಸೋಲಿಸೋದೆ ನಮ್ಮ ಗುರಿ: ಹನುಮಂತಪ್ಪ ಹೇಳಿಕೆಗೆ ರವಿ ಬಬಲೇಶ್ವರ ಖಂಡನೆ

ಜಮಖಂಡಿ: ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು
ಸೋಲಿಸುವುದೇ ನಮ್ಮ ಗುರಿ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ಎಚ್ ಹನುಮಂತಪ್ಪ ಹೇಳಿಕೆಯನ್ನು ಛಲವಾದಿ ಜಿಲ್ಲಾ ಮುಖಂಡ ರವಿ ಬಬಲೇಶ್ವರ ಖಂಡಿಸಿದ್ದಾರೆ.

ಎಜೆ ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಲಿ ಆಮೇಲೆ ವಿರೋಧದ ಮಾತನಾಡಲಿ. ಮಲ್ಲಿಕಾರ್ಜುನ್ ಖರ್ಗೆ, ಡಾ. ಜಿ ಪರಮೇಶ್ವರ, ಎಸ್ಸಿ ಮಹಾದೇವಪ್ಪ, ನರೇಂದ್ರಸ್ವಾಮಿ ಒಳಗೊಂಡಂತೆ ದಲಿತ ಸಮುದಾಯದ ರಾಜಕಾರಣಿಗಳನ್ನು ಸೋಲಿಸುವುದೇ ನಮ್ಮ ಪರಮಗುರಿ ಎಂದಿರುವ ಮಾದಿಗರಿಗೆ ನಮ್ಮ ಧಿಕ್ಕಾರವಿದೆ.

ಒಣ ಪ್ರತಿಷ್ಠೆಯನ್ನು ಬಿಟ್ಟು ರಾಜ್ಯದಲ್ಲಿನ ಎಡ ಬಲ ನಾಯಕರನ್ನು ಒಂದುಗೂಡಿಸಿ ಸದಾಶಿವ ಆಯೋಗದ ಸಂಪೂರ್ಣ ವರದಿಯನ್ನು ಚರ್ಚಿಸುವ ಮೂಲಕ ರಾಜ್ಯದಲ್ಲಿ ಹೋರಾಟಕ್ಕೆ ಮುನ್ನುಗ್ಗುವ ಕೆಲಸ ನಡೆಯಬೇಕಾಗಿದೆ ಎಂದು ಸಲಹೆ ನೀಡಿದರು.

Leave a Reply

Your email address will not be published.