ಮೈಲಾರಲಿಂಗೇಶ್ವರ ಕಾಲೇಜು ವಿದ್ಯಾರ್ಥಿನಿ ನಿರ್ಮಲಾಗೆ ಚಿನ್ನದ ಪದಕ


ಸುರಪುರ: ಶ್ರೀ ಮೈಲಾರಲಿಂಗೇಶ್ವರ ಸ್ನಾತಕೋತ್ತರ ಮಹಾವಿದ್ಯಾಲಯ ರಂಗಂಪೇಟೆಯ ಎಂ. ಎ. ರಾಜ್ಯಶಾಸ್ತ್ರ ವಿಭಾಗದ ನಿರ್ಮಲಾ ದೇವಿಂದ್ರಪ್ಪ ಎಂಬ ವಿದ್ಯಾರ್ಥಿನಿಗೆ ಚಿನ್ನದ ಪದಕ ಹಾಗೂ ಆರು ಪ್ರಮಾಣ ಪತ್ರಗಳ ಪಡೆದು ಸಾಧನೆ ಮಾಡಿದ್ದಾಳೆ.

ಚಿನ್ನದ ಪದಕ ಹಾಗೂ ಪ್ರಮಾಣ ಪತ್ರಗಳನ್ನು ವಿಶ್ವವಿದ್ಯಾಲಯದ ಕುಲಪತಿಗಳು ಇಂದು ನಡೆದ ವಿವಿಯ 37ನೇ ಘಟಿಕೋತ್ಸವದಲ್ಲಿ ವಿತರಿಸಿ ಸನ್ಮಾನಿಸಿದರು.

ವಿದ್ಯಾರ್ಥಿನಿಯ ಈ ಸಾಧನೆಗೆ ಡಾ.  ಬಿ.ಆರ್.ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೀಮಣ್ಣ ಬಿಲ್ಲವ್ , ಮಹಾವಿದ್ಯಾಲಯದ ಪ್ರಾಂಶುಪಾಲ ಮಲ್ಲಿಕಾರ್ಜುನ ಕುಲಕರ್ಣಿ ಗೌಡಗೇರಾ ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿನಿಯ ಪೋಷಕರು ಸಾಧನೆಗೆ ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.