ಕಲಬುರಗಿ ವಿವಿ ವಿದ್ಯಾರ್ಥಿ ಗಂಗಾಧರ ಬೆಳ್ಳಂಕಿಗೆ ಚಿನ್ನದ ಪದಕ


ಕಲಬುರಗಿ: ಕಲಬುರಗಿ ವಿಶ್ವವಿದ್ಯಾಲಯದ “ದೈಹಿಕ ಶಿಕ್ಷಣ” ವಿಭಾಗದಲ್ಲಿ ಪದವಿ ಪಡೆದ  ಗಂಗಾಧರ ಬೆಳ್ಳಂಕಿ ಎಂಬ ವಿದ್ಯಾರ್ಥಿ ಅತೀ ಹೆಚ್ಚು ಅಂಕ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇಂದು ಕಲಬುರಗಿ ವಿವಿ ಆವರಣದಲ್ಲಿ ನಡೆದ 37 ನೇ ಘಟಿಕೋತ್ಸವದಲ್ಲಿ ಕುಲಪತಿ ಡಾ. ಎಸ್.ಆರ್. ನಿರಂಜನ ಅವರು ಚಿನ್ನದ ಪದಕ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಸನ್ಮಾನಿಸಿದರು.

ದೈಹಿಕ ಶಿಕ್ಷಣ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದು ಗಂಗಾಧರ ಚಿನ್ನದ ಪದಕಕ್ಕೆ ಪಡೆದಿದ್ದಾರೆ.  ಅಥಣಿ ತಾಲೂಕಿನ ದೇವರಡ್ಡೇರಹಟ್ಟಿ ಗ್ರಾಮದ ಗಂಗಾಧರ ಬೆಳ್ಳಂಕಿ ಕಡುಬಡತನದಲ್ಲಿ ಬೆಳೆದು ಉತ್ತಮ ಸಾಧನೆ ಮಾಡಿದ್ದು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published.