ಕೊಪ್ಪಳ ಲೋಕಸಭಾ ಕ್ಷೇತ್ರ : ಕಾಂಗ್ರೆಸ್ ಪಾಳಯದಲ್ಲಿ ಯಾರ ‘ಕೈ’ ಮೇಲು


 “ಬಿಜೆಪಿಯಿಂದ ಹಾಲಿ ಸಂಸದ ಕರಡಿ ಸಂಗಣ್ಣ”

 “ಕೈ ಶಾಸಕ ಹಿಟ್ನಾಳ ಕುಟುಂದವರಿಗೆ ಟಿಕೇಟ್ ಗೆ ವಿರೋಧ”

ಕೊಪ್ಪಳ : ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಕಳೆದ ಒಂದು ದಶಕದಿಂದ ಬಿಜೆಪಿ ಕೈವಶವಾಗಿದ್ದು. ಇದನ್ನು ಮರಳಿ ಕೈ ವಶ ಮಾಡಿಕೊಳ್ಳಲು ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಆಯ್ಕೆಗೆ ಕಸರತ್ತುನಡೆಸಿದ್ದು, ಆಕಾಂಕ್ಷಿಗಳ ಸಂಖ್ಯೆಯು ಹೆಚ್ಚಾಗಿದೆ.

ಕೊಪ್ಪಳ ಕಾಂಗ್ರೆಸ್ ನಲ್ಲಿ ಅಂತಿಮವಾಗಿ ನಡೆಯುವುದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತೇ ಅಂತಿಮ. ಪಕ್ಷದಲ್ಲಿ ಎಷ್ಟೇಆಕಾಂಕ್ಷಿಗಳ ಪಟ್ಟಿ ದೊಡ್ಡದಿರಲಿ,ರಾಜಕೀಯ ಮತ್ತು ಜಾತಿಯ ಲೆಕ್ಕಾಚಾರ,ಹಾಗೂ ಗೆಲುವಿನ ಮಾನದಂಡವೇ ಪ್ರಮುಖವಾಗಿದೆ. ಈ ಮಧ್ಯೆದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರದ ಮೇಲೆ ನಿಂತಿದೆ ಎನ್ನಲಾಗುತ್ತಿದೆ.

ಪ್ರಸ್ತುತ ಬಿಜೆಪಿಯ ಹಾಲಿ ಸಂಸದ ಸಂಗಣ್ಣ ಕರಡಿ ಅವರೇಮತ್ತೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಇಲ್ಲಿ ಟಿಕೆಟ್ ಗಾಗಿ ಪೈಪೋಟಿ ಕಂಡುಬಂದಿಲ್ಲ, ಆದರೂ ಸಿ.ವಿ.ಚಂದ್ರಶೇಖರ್, ಡಾ.ಕೆ.ಎಸ್. ಬಸವರಾಜ ಅವರ ಹೆಸರುಗಳು ಚಾಲ್ತಿಯಲ್ಲಿವೆ. ಸಂಸದಕರಡಿ ಅವರನ್ನು ಈ ಸಾರಿ ಶತಾಗಥಾಯ ಸೋಲಿಸಬೇಸಿಕುಎಂದು ಪಣತೊಟ್ಟಿರುವ ಶಾಸಕರಾಘವೇಂದ್ರಹಿಟ್ನಾಳ ಕುಟುಂಬ ಟಿಕೆಟ್ ಪಡೆದು ಜಿಲ್ಲೆಯಲ್ಲಿ ತನ್ನಪ್ರಭಾವಉಳಿಸಿಕೊಳ್ಳುವಲ್ಲಿ ತಂತ್ರಗಾರಿಕೆಯನ್ನು ನಡೆಸಿದೆ. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯನವರ ಹಾಗೂ ಜಾತಿಜನರ ಬೆಂಬಲವಿದೆ.

ಕಾಂಗ್ರೆಸ್ ನಲ್ಲಿ ಹೆಚ್ಚಿದ ಟಿಕೆಟ್ ಆಕಾಂಕ್ಷಿಗಳು: ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋಲುನ್ನು ಕಂಡಿದ್ದಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಮತ್ತು ಇವರ ಪುತ್ರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷಕೆ.ರಾಜಶೇಖರ ಹಿಟ್ನಾಳ, ಹಾಗೂಮಾಜಿ ಸಚಿವ ಬಸವರಾಜ ರಾಯರಡ್ಡಿ, ರಾಜ್ಯಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಿವರಾಮಗೌಡ, ಅಮರೇಗೌಡ ಬಯ್ಯಾಪುರ ಸಹೋದರನ ಪುತ್ರ ಶರಣೇಗೌಡ ಬಯ್ಯಾಪುರ ಹೆಸರುಗಳು ಪಕ್ಷದ ಹೈಕಮಾಂಡವರೆಗೆ ತಲುಪಿವೆ ಎಂದುಕೇಳಿ ಬರುತ್ತಿದೆ.

ಜಾತಿ ಮಾನದಂಡ ಆಧಾರದ ಮೇಲೆ ಮಾಜಿ ಶಾಸಕಕೆ. ಬಸವರಾಜ ಹಿಟ್ನಾಳ ಬಿಜೆಪಿ ವಿರುದ್ಧಸಮರ್ಥ ಅಭ್ಯರ್ಥಿ ಎಂದೇ ಹೇಳಲಾಗುತ್ತಿದ್ದು, ಈ ಮಧ್ಯೆದಲ್ಲಿ ಅವರಪುತ್ರ ರಾಜಶೇಖರ ಹಿಟ್ನಾಳತಮಗೆ ಟಿಕೆಟ್ ಕೊಡಿಸಬೇಕು ಎಂದು ತೀವ್ರ ಒತ್ತಡ ಹೇರಿದ್ದು, ಇದು ಹಿಟ್ನಾಳಕುಟುಂಬದಲ್ಲಿಯೇ ಫೈಟ್ ನಡೆದಿದೆ. ಇದು ತೀವ್ರ ರಾಜಕೀಯ ಚಟುವಟಿಕೆಗೆ ಕಾರಣವಾಗಿದೆ.

ಹಿಟ್ನಾಳ ಕುಟುಂಬಕ್ಕೆ ಟಿಕೆಟ್ ಕಾಂಗ್ರೆಸ್ ನಲ್ಲಿ ವಿರೋಧ : ಹಿಟ್ನಾಳ ಕುಟುಂಬಕ್ಕೆ ಟಿಕೆಟ್ ನೀಡಲು ಪಕ್ಷದಕೆಲವು ಮುಖಂಡರ ವಿರೋಧವಿದ್ದು, ಒಬ್ಬ ಪುತ್ರ ಕೆ.ರಾಘವೇಂದ್ರ ಹಿಟ್ನಾಳ ಈಗಾಗಲೇ ಶಾಸಕ, ಸಂಸದೀಯಕಾರ್ಯದರ್ಶಿ ಸ್ಥಾನ ಪಡೆದಿದ್ದು, ಮತ್ತೆ ಅವರನ್ನು ಉಮೇದುವಾರರನ್ನಾಗಿ ಮಾಡಿದರೆ ಭಿನ್ನಮತಎದುರಾಗಲಿದೆ ಎನ್ನಲಾಗಿದ್ದು, ಇದರಿಂದ ಜಿಲ್ಲಾ ಕಾಂಗ್ರೆಸ್ ನಲ್ಲಿ ಒಳಗಡೆ ಭಿನ್ನಮತ ಹುಟ್ಟಲು ಕಾರಣವಾಗುತ್ತಿದೆ.

ಮಾಜಿ ಸಚಿವ ಬಸವರಾಜ ರಾಯರಡ್ಡಿ ಸ್ಪರ್ಧೆಗೆ ಒಲವು ತೋರಸಿದ್ದು, ತೆರೆಮರೆಯಲ್ಲಿ ಸ್ಪರ್ಧೆಗೆ ತಯಾರಿನಡೆಸಿಕೊಂಡು ದೆಹಲಿ ಮಟ್ಟದವರೆಗೆ ತಮ್ಮ ಪ್ರಭಾವ ಬೀರಿದ್ದು ತಿಳಿದು ಬಂದಿದೆ. ಸ್ಥಳೀಯ ಮಟ್ಟದಲ್ಲಿ ಅವರ ಹೆಸರು ಶಿಫಾರಸ್ಸುಗೊಳ್ಳದಿದ್ದರೂ ಸಹ ಇದನ್ನು ನೆಚ್ಚಿಕೊಂಡಿಲ್ಲ, ಹೀಗಾಗಿ ಹಿಟ್ನಾಳ ಮತ್ತು ಇತರೆಅಕಾಂಕ್ಷಿಗಳಲ್ಲಿ ತಳಮಳಕ್ಕೆ ಕಾರಣವಾಗಿದೆ.

ಬಿಜೆಪಿಗೆ ಕ್ಷೇತ್ರವನ್ನು ಉಳಿಸಿಕೊಳ್ಳುವದಕ್ಕಾಗಿ ತನ್ನ ತಂತ್ರಗಾರಿಕೆ, ಪಕ್ಷಸಂಘಟನೆಯಲ್ಲಿ ನಿರತವಾಗಿದ್ದು, ಬೂತ ಮಟ್ಟದಲ್ಲಿ ಕಾರ್ಯಕರ್ತರನ್ನು ಚುನಾವಣೆಗೆ ಸಿದ್ಧಪಡಿಸಿ, ಮತದಾರರನ್ನು ತನ್ನತ್ತ ಸೆಳೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯನ್ನು ಮುಂದಿಟ್ಟುಕೊಂಡು ಹೋರಟಿದ್ದು, ಇತ್ತ ಕಾಂಗ್ರೆಸ್ ನಲ್ಲಿ ಪಕ್ಷವನ್ನು ಹಾಗೂ ಕಾರ್ಯಕರ್ತರ ಪಡೆಯನ್ನು ಹೋರಾಟಕ್ಕೆ ಆಣೆಗೊಳಿಸಿಲ್ಲ.

ಇತ್ತ ಜೆಡಿಎಸ್ ನ ಸಂಘಟನೆಯು ಹೇಳಿಕೊಳ್ಳುವಂತೆ ಇಲ್ಲದಿದ್ದರೂ ರಾಜ್ಯ ಮಟ್ಟದಲ್ಲಿನ ಹೊಂದಾಣಿಕೆಯಿಂದ ಕಾಂಗ್ರೆಸ್ ಗೆ ಬೆಂಬಲಿಸಬಹುದು ಅಷ್ಟೇ, ದೆಹಲಿ ತಲುಪಿರುವ ಟಕೆಟ್ ಆಕಾಂಕ್ಷಿಗಳು ಮಾಜಿ ಸಿಎಂ ಸಿದ್ದರಾಮಯ್ಯ ಹಿಂದೆ ಬೆನ್ನು ಹತ್ತಿದ್ದು, ಯಾವುದೇ ನಿರ್ಧಾರವು ಸಿದ್ದರಾಮಯ್ಯ ಅವರ ಮೇಲೆ ಅಲಂಬಿತವಾಗಿದೆ.

ಹೆಚ್ಚಿದ ಮತದಾರರು:

ಆದರೆ ಕಳೆದ 2014 ಚುನಾವಣೆಯಲ್ಲಿ 15,02,785 ಮತದಾರರಲ್ಲಿ ಕಾಂಗ್ರೆಸ್‌ನ ಕೆ.ಬಸವರಾಜ ಹಿಟ್ನಾಳ 4,53,969 ಮತಗಳನ್ನು ಪಡೆದರೆ ಬಿಜೆಪಿಯ ಸಂಗಣ್ಣ ಕರಡಿಯವರು 4,86,363 ಮತಗಳು ಪಡೆದು 32,412 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು.

ಆದರೆ ಈ ಬಾರಿ ಕ್ಷೇತ್ರದಲ್ಲಿ 8,53,745 ಪುರುಷರು, 8,62,903 ಮಹಿಳಾ ಮತದಾರರು ಹಾಗೂ ಇತರೆ 112 ಮತದಾರು ಸೇರಿ ಒಟ್ಟು 17,16,760 ಮತದಾರದ್ದಾರೆ.(ಇದು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.) ಮತದಾರ ಯಾರ ಕಡೆ ಒಲಿಯುತ್ತಾನೆ ಎಂಬುದನ್ನು ಕೂತುಹಲ.

ಕ್ಷೇತ್ರದ ವಿಶೇಷತೆ : ಹಲವಾರು ರಾಜಕೀಯ ನಾಯಕರಿಗೆ ಸೋಲಿನ ಕಹಿ, ಇನ್ನೂ ಕೆಲವರಿಗೆ ಗೆಲುವಿನ ಸಿಹಿ ನೀಡಿದೆ. 1989 ರಲ್ಲಿ ಬಸವರಾಜ ಪಾಟೀಲ ಅನ್ವರಿಯವರು ದೇಶದ ಇತಿಹಾದಲ್ಲಿಯೇ ಅಂದಿನ ಜನತಾದಳ ಪಕ್ಷದಿಂದ ಒಬ್ಬರೆ ಜಯಶಾಲಿಯಾಗಿ ಕೇಂದ್ರ ಸಚಿವರಾಗಿದ್ದು, 1991 ರಲಿ ಸಿದ್ದರಾಮಯ್ಯನವರು ಸ್ಪರ್ಧಿಸಿ, ಸೋಲಿನ ಕಹಿ ಅನುಭವಿದ್ದು ಮರೆಯುವಂತಿಲ್ಲ. ಇಲ್ಲಿ ಕಳೆದ 1952ರಿಂದ ಇಲ್ಲಿವರೆಗಿನ ಚುನಾವಣೆಯಲ್ಲಿ 11 ಬಾರಿ ಕಾಂಗ್ರೆಸ್ ಗೆದ್ದು ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಿಕೊಂಡರೆ, ಒಂದು ಪಕ್ಷೇತರ, ಎರಡು ಬಾರಿ ಜನತಾ ದಳ, ಮತ್ತು ಎರಡು ಬಾರಿ ಬಿಜೆಪಿ ಪಾಲಾಗಿದೆ.

-ಮೌಲಾಹುಸೇನ ಬುಲ್ಡಿಯಾರ್

Leave a Reply

Your email address will not be published.