ಸದ್ದಿಲ್ಲದೇ ನಡೆದಿತ್ತು ಮಹಿಳೆಯರ ಮಾರಾಟ..? ಅಮಾನವೀಯ ದುರ್ಘಟನೆಗೆ ಸಾಕ್ಷಿಯಾದ ಗಿಣಗೇರಾ

ಇಟ್ಟಂಗಿ ಭಟ್ಟಿಯಲ್ಲಿ ಓರಿಸ್ಸಾ ಮೂಲದ 45 ಜನರ ಪತ್ತೆ ದೃಡಪಟ್ಟ ಜೀತಪದ್ಧತಿ

ರಕ್ಷಿತ ಎಲ್ಲಾ ಜೀತದಾಳುಗಳನ್ನು ಓರಿಸ್ಸಾಕ್ಕೆ ಕಳುಹಿಸಲು ಜಿಲ್ಲಾಡಳಿತ ಸಿದ್ಧತೆ – ಡಿ.ಸಿ.ಸುನೀಲ್ ಕುಮಾರ

ಮಾನವ ಅನೈತಿಕ ಕಳ್ಳಸಾಗಾಣಿಕೆ, ಜೀತ ಪದ್ಧತಿ ನಿರ್ಮೂಲನಾ ಕಾಯ್ದೆಯಡಿ ಆರೋಪಿ ಬಂಧನ..|

ಗಿಣಗೇರಾ ಗ್ರಾಮದ ಇಟಂಗಿ ಭಟ್ಟಿಯಲ್ಲಿ ರಕ್ಷಿಸಲಾದ ಓರಿಸ್ಸಾ ಮೂಲಕದ ಕಾರ್ಮಿಕರು

ಕೊಪ್ಪಳ :ಜಿಲ್ಲಾ ಕೇಂದ್ರದಿಂದ ಸುಮಾರು ಹತ್ತೇ ಕಿ.ಮೀ. ದೂರದಲ್ಲಿರುವ ಗಿಣಗೇರಾ ಗ್ರಾಮದಲ್ಲಿ ಕಂಡುಬಂದಿರುವ ಅಮಾನವೀಯ ದುರ್ಘನೆಯೊಂದು ಇಡೀ ಜಿಲ್ಲೆಯನ್ನು ಬೆಚ್ಚಿಬಿಳಿಸುವುಂತೆ ಮಾಡಿದೆ, ಹೊಟ್ಟೆಪಾಡಿಗಾಗಿ ಕೂಲಿ ಆರಿಸಿಬಂದ ದೂರದ ಓರಿಸ್ಸಾ ಮೂಲದ ಸುಮಾರು 50ಕ್ಕೂ ಹೆಚ್ಚು ಜನರನ್ನು ಕೂಡಿ ಹಾಕಿ, ಬೇಕಾಬಿಟ್ಟಿ ಬಳಸಿಕೊಂಡು, ಮಹಿಳೆಯರನ್ನು ಮಾರಾಟ ಮಾಡುವ ದಂಧೆಯೂ ನಡೆದಿರುವ ಬಗ್ಗೆ ತಿಳಿದು ಬಂದಿದೆ.

ಗಿಣಗೇರಾ ಸೇರಿದಂತೆ ಗಂಗಾವತಿಯವರೆಗೆ ಹಬ್ಬಿಕೊಂಡಿರುವ ಇಲ್ಲಿಯ ಇಟ್ಟಂಗಿ ಭಟ್ಟಿಗಳು ಬಹುತೇಕ ಆಂಧ್ರ ಪ್ರದೇಶದವರಿಗೆ ಸೇರಿದ್ದು, ಇವು ಕೆಲ ಅನೈತಿಕ, ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ತಾಣವಾಗಿದ್ದು, ಸ್ಥಳೀಯರನ್ನು ಕೆಲಸಕ್ಕೆ ತೆಗೆದುಕೊಂಡರೆ ಎಲ್ಲವೂ ಬಹಿರಂಗವಾಗುವ ಹಿನ್ನಲೆಯಲ್ಲಿ ಓರಿಸ್ಸಾ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ ಇತರೆ ರಾಜ್ಯಗಳಿಂದ ಬರುವ ಕೂಲಿ ಕಾರ್ಮಿಕರನ್ನು ಇಟ್ಟಂಗಿ ಭಟ್ಟಿ, ಕೆಲ ಕೈಗಾರಿಕೆಗಳಲ್ಲಿ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯ ಗಿಣಗೇರಾ ಗ್ರಾಮದ ಇಟ್ಟಂಗಿ ಭಟ್ಟಿ ತಯಾರಿಸುತ್ತಿರುವ ಘಟಕದಲ್ಲಿ ಓರಿಸ್ಸಾ ಮೂಲದ ವಿವಿಧ ಜಿಲ್ಲೆಗಳ ಸುಮಾರು 45 ಜನರನ್ನು ಜೀತ ಕಾರ್ಮಿಕರನ್ನಾಗಿ ಅದರಲ್ಲಿಯೂ ಹತ್ತಕ್ಕೂ ಹೆಚ್ಚು ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುವುತ್ತಿರುವುದು, ಹಾಗೂ ಇವರಿಗೆ ದುಡಿಮೆ ತಕ್ಕಂತೆ ಸಂಬಳ ನೀಡದೆ, ಹೊರ ಜಗತ್ತಿನಿಂದ ದೂರವಿಟ್ಟು, ಸಾಮಾಜಿಕ ಬದುಕನ್ನು ಕಸಿದುಕೊಂಡು, ಅಮಾನವೀಯಯಾಗಿ ನಡೆಸಿಕೊಂಡಿರುವ ಘಟನೆಯನ್ನು ಜಿಲ್ಲಾಡಳಿತ ಕೊನೆಗೂ ಭೇದಿಸಿದೆ.

ಶುಕ್ರವಾರ ತಡ ರಾತ್ರಿ ಬೆಳಕಿಗೆ ಬಂದಿರುವ ಈ ಘಟನೆಯಿಂದ ಬೆಳಕಿಗೆ ಬಂದಿರುವ ಅಂಶಗಳು ಬೆಚ್ಚಿಬಿಳಿಸುತ್ತಿವೆ, ಕೊಲಿ ಕೆಲಸಕ್ಕೆ ಇದ್ದ ಕೆಲ ಮಹಿಳೆಯರನ್ನು ಬಲವಂತವಾಗಿ ಲೈಗಿಂಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು, ಹಾಗೂ ಮಾರಾಟ ಮಾಡಲು ಯತ್ನಿಸಿದ ಘಟನೆಗಳು ಜರುಗಿರುವ ಬಗ್ಗೆ ಜೀತಕ್ಕೆ ಇದ್ದ ಕಾರ್ಮಿಕರಿಂದ ಗೊತ್ತಾಗಿದೆ.

ಗಿಣಗೇರಾ ಗ್ರಾಮದ ಸ.ನಂ : 61/ಸಿ ರಲ್ಲಿ 3 ಎಕರೆ ಜಮೀನಿನಲ್ಲಿ 58 ಜನರ ಪೈಕಿ 45 ಜನ ಜೀತದಾಳುಗಳಾಗಿ ಕೆಲಸಕ್ಕೆ ದುಡಿಸಿಕೊಳ್ಳುತ್ತಿರುವುದು ಕಂಡುಬಂದಿರುತ್ತದೆ. ಇದರಲ್ಲಿ 07 ಬಾಲಕಾರ್ಮಿಕರಿದ್ದು, ಇದೊಂದು ಜೀತಪದ್ಧತಿಯೆಂದು ದೃಢಪಟ್ಟಿದೆ, ಐ.ಜೆ.ಎಂ. ರವರ ಮಾಹಿತಿ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಜೀತದಾಳು ಪ್ರಕರಣವನ್ನು ಭೇಧಿಸಿ, ಎಲ್ಲಾ 58 ಜನರನ್ನು ರಕ್ಷಿಸಿ ಅವರಿಗೆ ಸರ್ಕಾರಿ ವಸತಿ ನಿಲಯದಲ್ಲಿ ತಾತ್ಕಾಲಿಕ ಆಶ್ರಯವನ್ನು ಕಲ್ಪಿಸಿಕೊಡಲಾಗಿದೆ.

ಆರೋಪಿ ಬಂಧನ : ಮಾನವ ಅನೈತಿಕ ಕಳ್ಳ ಸಾಗಾನಿಕೆ, ಜೀತ ಕಾರ್ಮಿಕ ನಿರ್ಮೂಲನಾ ಕಾಯ್ದೆ ಹಾಗೂ ಬಾಲ ನ್ಯಾ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ ಮತ್ತು ಭಾರತ ದಂಡ ಸಂಹಿತೆ ಸೆಕ್ಸನ್ -370 ರನ್ವಯ ಇಟ್ಟಂಗಿ ಭಟ್ಟಿ ಮಾಲಿಕ ರಮೇಶ ಹಜರತಯ್ಯ ಯೆಲ್ಲೂರ ಸಾ. ಗಿಣಗೇರಾ ಇತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದು, ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್.ಎ.ಆರ್.ದಾಖಲಿಸಿ, ಬಂಧನಕ್ಕೆ ಒಳಪಡಿಸಲಾಗಿದೆ.


ಇದೊಂದು ಅಮಾನವೀಯ, ದುರ್ಘಟನೆಯಾಗಿದೆ, ಎಲ್ಲಾ ಜೀತದಾಳುಗಳನ್ನು ರಕ್ಷಿಸಿದ್ದು, ಅವರಿಗೆ ಕಾನೂನು ರೀತ್ಯ ಪುನರ್ ವಸತಿ ಕಲ್ಪಿಸಲಾಗುವುದು, ಹಾಗೂ ಓರಿಸ್ಸಾ ರಾಜ್ಯಕ್ಕೆ ಅವರನ್ನು ಕಳುಹಿಸಿಕೊಡಲಾಗುತ್ತಿದೆ. ಜೀತಕ್ಕೆ ಇಟ್ಟುಕೊಂಡಿದ್ದ ಇಟ್ಟಂಗಿ ಭಟ್ಟಿ ಮಾಲಿಕನ ಕಾನೂನು ಕ್ರಮ ಜರುಗಿಸಿ, ಬಂಧಿಸಲಾಗಿದೆ, ಜಿಲ್ಲೆಯಲ್ಲಿ ಇಂತಹ ಯಾವುದೇ ಪ್ರಕರಣಗಳು ಜರುಗದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ – ಪಿ.ಸುನೀಲ್ ಕುಮಾರ, ಜಿಲ್ಲಾಧಿಕಾರಿ.

-ಮೌಲಾಹುಸೇನ ಬುಲ್ಡಿಯಾರ್, ಕೊಪ್ಪಳ

Leave a Reply

Your email address will not be published.