ದೇಶಕ್ಕೆ ನಮೋ.. ಕೊಪ್ಪಳಕ್ಕೆ ಸಂಗಣ್ಣ ಕರಡಿ : ಹನುಮೇಶ್ ಯಾದವ್

ಕೊಪ್ಪಳ ಬಿಜೆಪಿ ಶಕ್ತಿ ಕೇಂದ್ರಗಳಲ್ಲಿ ಪ್ರಬುದ್ಧರ, ಪ್ರಮುಖರ ಮಿಂಚಿನ ಸಂಚಾರ ..

ಕೊಪ್ಪಳ : ಲೋಕ ಸಮರಕ್ಕೆ ಅಖಾಡ ಸಿದ್ಧವಾಗಿರುವುಂತೆ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿ ನಡೆಸಿರುವ ದೇಶಕ್ಕೆ ಮೊತ್ತೊಮ್ಮೆ ನಮೋ.. ಕೊಪ್ಪಳಕ್ಕೆ ಸಂಗಣ್ಣ ಕರಡಿ ಅಭಿಯಾನವು ಬಿಜೆಪಿಯ ಶಕ್ತಿ ಕೇಂದ್ರಗಳಲ್ಲಿ ಪ್ರಬುದ್ಧರ ಮತ್ತು ಪ್ರಮುಖರ ಸಭೆ, ಸಂವಾದಗಳು ಬಲು ಜೋರಾಗಿಯೇ ನಡೆದಿವೆ.

ಭಾನುವಾರದಂದು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಶಕ್ತಿ ಕೇಂದ್ರದಲ್ಲಿ ಆನೆಗೊಂದಿ, ಮಲ್ಲಾಪೂರ, ಸಣಾಪುರ ನಡೆದ ಪ್ರಮುಖರ, ಪ್ರಬುದ್ಧರ ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ ಹನುಮೇಶ್ ಯಾದವ್ ಮಾತನಾಡಿ ಕೇಂದ್ರದ ಎನ್.ಡಿ.ಎ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ, ಹಾಗೂ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ಅವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಬೇಕಾಗಿದೆ, ದೇಶದ ರಕ್ಷಣೆಗಾಗಿ ಮೋದಿ, ಕ್ಷೇತ್ರದ ಅಭಿವೃದ್ಧಿಗಾಗಿ ಸಂಗಣ್ಣ ಕರಡಿ ಅವರನ್ನು ಆಯ್ಕೆ ಮಾಡುವುಂತೆ ಕರೆನೀಡಿದರು.

ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿ ಆಗಲೆಂದು ಆಶಿಸಿ ಕ್ಷೇತ್ರದ ಜನತೆ ಸಂಗಣ್ಣ ಕರಡಿ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಲಾಗಿತ್ತು, ದೇಶದ ರಕ್ಷಣೆ, ಹಾಗೂ ಅಭಿವೃದ್ಧಿಗಾಗಿ ಮೊತ್ತೊಮ್ಮೆ ದೇಶಕ್ಕೆ ನಮೋ.. ಕೊಪ್ಪಳಕ್ಕೆ ಸಂಗಣ್ಣ ಕರಡಿ ಎಂಬ ಘೋಷವಾಕ್ಯದಡಿ ಚುನಾವಣೆಯಲ್ಲಿ ಗೆಲುವಿಗಾಗಿ ಶಕ್ತಿಕೇಂದ್ರಗಳಲ್ಲಿ ಕಾಂiiಕರ್ತರ ಪಡೆಯನ್ನು ಸಿದ್ಧಗೊಳಿಸಲಾಗುತ್ತದೆ ಎಂದರು.

ಮೋದಿ ಆಡಳಿತದಿಂದ ದೇಶ ಬಲಿಷ್ಠವಾಗಿದೆ – ಅಮರೇಶ ಕರಡಿ : ಕಳೆದ ಐದು ವರ್ಷದಲ್ಲಿ ದೇಶದಲ್ಲಿ ಅಭಿವೃದ್ಧಿ ಪರ್ವ ನಡೆದಿದ್ದು, ಪ್ರಮುಖ ರಂಗಗಳಲ್ಲಿನ ಸಾಧನೆಯಿಂದ ಭಾರತ ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಬೆಳೆದು ನಿಂತಿದೆ ಎಂದು ಮುಖಂಡ ಅಮರೇಶ ಕರಡಿ ಹೇಳಿದರು. ಆನೆಗೊಂದಿ ಶಕ್ತಿ ಕೇಂದ್ರಕ್ಕೆ ಭೇಟ್ಟಿ ನೀಡಿ ಅಲ್ಲಿನ ಪ್ರಮುಖರೊಂದಿಗೆ ಸಂವಾದ ನಡೆಸಿದ ಅವರು ಪ್ರಧಾನಿ ಮೋದಿಯವರ ದಿಟ್ಟ ನಿಲುವು ಹಾಗೂ ಅವರ ದೂರದೃಷ್ಠಿಯಿಂದಾಗಿ ಭಾರತ ಜಗತ್ತಿನಲ್ಲಿ ಮುಂದುವರೆದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ರೂಪಗೊಂಡಿದೆ ಎಂದರು.

ಈಗಾಗಲೇ ಕ್ಷೇತ್ರದಲ್ಲಿನ ಎಲ್ಲಾ ಶಕ್ತಿ ಕೇಂದ್ರಗಳಲ್ಲಿ ಪ್ರಬುದ್ಧರ, ಪ್ರಮುಖರ ಸಭೆ, ಸಂವಾದಗಳು ನಡೆದಿದ್ದು, ಜನರಿಗೆ ಬಿಜೆಪಿಯ ಸಾಧನೆಗಳ ಜೊತೆ ದೇಶವನ್ನು ಮತ್ತೇ ಮುನ್ನೆಡಸಲು ಮೋದಿ ಮೊತ್ತೊಮ್ಮೆ ನಮೋ ಗಾಗಿ ಇಲ್ಲಿ ಬಿಜೆಪಿ ಗೆಲ್ಲಲೆಬೇಕು ಅದಕ್ಕೆ ಪಕ್ಷದ ಕಾರ್ಯಕರ್ತರ ಪಡೆ ಸಿದ್ಧಗೊಂಡಿದೆ ಎಂದು ಹೇಳಿದ ಅಮರೇಶ ಕರಡಿಯವರು ಶಕ್ತಿ ಕೇಂದ್ರಗಳ ಮೂಲಕ ಜನರ ಮನೆಬಾಗಿಲಿಗೆ ತಲುಪಿಸಲಾಗುತ್ತದೆ ಎಂದರು.

ಆನೆಗೊಂದಿ, ಸಾಣಪೂರ, ಹಾಗೂ ಮಲ್ಲಾಪುರ ಶಕ್ತಿಕೇಂದ್ರಗಳಿಗೆ ಭೆಟಿ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಕಳಕಪ್ಪ ಜಾಧವ್, ಶ್ರೀಶರಾವ್, ರಾಜಶ್ವರಿ, ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published.